ನಾನು ಗೋಮಾಂಸ ತಿನ್ನುತ್ತೇನೆ, ಅದನ್ನು ಯಾರಾದರೂ ತಡೆಯುತ್ತಾರಾ? ಕಿರೇನ್ ರಿಜಿಜು

ಗೋಮಾಂಸ ತಿನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂಬ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿಕೆಗೆ ಸಂಪುಟ ಸಹೋದ್ಯೋಗಿಗಳೇ ಅಸಹನೆ ವ್ಯಕ್ತ ಪಡಿಸಿದ್ದಾರೆ....
ಕಿರೇನ್ ರಿಜಿಜು
ಕಿರೇನ್ ರಿಜಿಜು

ನವದೆಹಲಿ: ಗೋಮಾಂಸ ತಿನ್ನುವವರು ಪಾಕಿಸ್ತಾನಕ್ಕೆ ಹೋಗಲಿ ಎಂಬ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿಕೆಗೆ ಸಂಪುಟ ಸಹೋದ್ಯೋಗಿಗಳೇ ಅಸಹನೆ ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ವ್ಯವಹಾರಗಳ ರಾಜ್ಯ ಸಚಿವ ಕಿರೇನ್ ರಿಜಿಜು ನಖ್ವಿ ಹೇಳಿಕೆ ವಿರುದ್ಧ ಹರಿಹಾಯ್ದಿದ್ದಾರೆ.

ಅರುಣಾಚಲ ಪ್ರದೇಶದಿಂದ ಬಂದಿರುವ ನಾನು ಗೋಮಾಂಸ ತಿನ್ನುತ್ತೇನೆ. ನಾನು ಗೋಮಾಂಸ ತಿನ್ನುವುದನ್ನು ಯಾರಿಂದಲಾದರೂ ತಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಆಹಾರದ ವಿಷಯದಲ್ಲಿ ಜನ ರೂಢಿ ಅಭ್ಯಾಸಗಳನ್ನು ತಪ್ಪು ಎನ್ನುವುದು ಸರಿಯಲ್ಲ ಎಂದರು ಹೇಳಿದ್ದಾರೆ.

ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿಕೆ ಸರಿಯಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಅವರು ಹಾಗೆ ಹೇಳಿದ್ದಾರೆ. ದೇಶದಲ್ಲಿರುವ ಪ್ರತಿ ವ್ಯಕ್ತಿಗಳು ಸಮಾನರು. ಅವರ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ ಎಂದರು. ಇನ್ನು ಮಹಾರಾಷ್ಟ್ರದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಅಲ್ಲಿ ಗೋಮಾಂಸ ನಿಷೇಧಿಸುವುದು ಅಲ್ಲಿನ ಸರ್ಕಾರಕ್ಕೆ ಬಿಟ್ಟ ವಿಚಾರ.

ಅರುಣಾಚಲ ಪ್ರದೇಶ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಗೋಮಾಂಸ ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲಿ ನಿಷೇಧ ಮಾಡಬೇಕು ಎನ್ನುವ ವಿಚಾರ ಸರಿಯಲ್ಲ ಎಂದು ಹೇಳಿದರು. ಪ್ರತಿಯೊಬ್ಬರ ಭಾವನೆಗಳು ಹಾಗೂ ಆಹಾರ ಪದ್ದತಿಗಳನ್ನು ಗೌರವಿಸಬೇಕು ಎಂದು ಹೇಳಿದರು.

ಒಟ್ಟಿನಲ್ಲಿ ಗೋಮಾಂಸ ದೇಶದಲ್ಲಿ ಗೋಮಾಂಸ ಭಕ್ಷಣೆಯನ್ನು ನಿಷೇಧಿಯಬೇಕೆಂಬ ಎನ್ ಡಿಎ ಸರ್ಕಾರದ ನಿಲುವಿಗೆ ಬಿಜೆಪಿಯಲ್ಲೇ ಒಮ್ಮತವಿಲ್ಲ ಎಂಬುದು ಸ್ಪಷ್ಟವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com