
ಅಹಮದಾಬಾದ್: ಯುಪಿಎ ಸರ್ಕಾರದ ಅವಧಿಯಲ್ಲಿ ಟ್ರಾಯ್ ಮಾಜಿ ಅಧ್ಯಕ್ಷ ಪ್ರದೀಪ್ ಬೈಜಾಲ್ ಅವರು ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಹೇಳಿದ್ದಾರೆ.
2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ವಿರುದ ಪ್ರದೀಪ್ ಬೈಜಾಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, 'ಅವರು ನನ್ನ ಜೊತೆನೂ ಕೆಲಸ ಮಾಡಿದ್ದಾರೆ. ಅವರು ಒಬ್ಬ ದಕ್ಷ ಮತ್ತು ಉತ್ತಮ ಅಧಿಕಾರಿ' ಎಂದರು.
'ಬೈಜಾಲ್ ಅವರನ್ನು ಗುರಿಯಾಗಿಸಿಕೊಂಡು ಯುಪಿಎ ಸರ್ಕಾರ ಕಿರುಕುಳ ನೀಡಿದೆ. ಅವರು ನಿವೃತ್ತಿ ನಂತರ ನನ್ನನ್ನು ಭೇಟಿ ಮಾಡಿದ್ದರು ಮತ್ತು ಅವರಿಗೆ ಕಿರುಕುಳ ನೀಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು' ಎಂದು ಜೇಟ್ಲಿ ಹೇಳಿದ್ದಾರೆ.
ಮಾಜಿ ದೂರಸಂಪರ್ಕ ಸಚಿವ ದಯಾನಿಧಿ ಮಾರನ್‌ಗೆ ಸಹಕರಿಸದಿದ್ದರೆ ಪರಿಸ್ಥಿತಿ ಗಂಭೀರವಾಗಬಹುದು ಎಂದು ಮಾಜಿ ಪ್ರಧಾನಿ ಸಿಂಗ್ ಎಚ್ಚರಿಸಿದ್ದರು ಎಂದು ಬೈಜಾಲ್ ಆರೋಪಿಸಿದ್ದಾರೆ.
ಸಿಂಗ್ ಅವರು ಸಮ್ಮಿಶ್ರ ಸರ್ಕಾರದ ಮೈತ್ರಿ ಧರ್ಮಕ್ಕೆ ಕಟ್ಟುಬಿದ್ದಿದ್ದರು. ಮಾರನ್ ಹೇಳಿದ್ದನ್ನೆಲ್ಲ ಪಾಲಿಸುವಂತೆ ಸೂಚಿಸಿದ್ದರು ಎಂದು 2ಜಿ ಪ್ರಕರಣದಲ್ಲಿ ತನಿಖೆ ಎದುರಿಸಿದ್ದ ಬೈಜಾಲ್ ತಮ್ಮ
'ದಿ ಕಂಪ್ಲೀಟ್ ಸ್ಟೋರಿ ಆಫ್ ಇಂಡಿಯನ್ ರಿಫಾರ್ಮ್ಸ್: 2ಜಿ, ಪವರ್ ಆಂಡ್ ಪ್ರೈವೇಟ್ ಎಂಟರ್‌ಪ್ರೈಸ್ - ಎ ಪ್ರ್ಯಾಕ್ಟಿಷನರ್ಸ್ ಡೈರಿ'ಯಲ್ಲಿ ಈ ಅಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.
Advertisement