ಆಹಾರ ಭದ್ರತೆ ಒದಗಿಸುವಲ್ಲಿ ಮೋದಿ ಸರ್ಕಾರ ವಿಫಲ: ಸಿಪಿಎಂ ಟೀಕೆ

ಜಗತ್ತಿನಲ್ಲಿ ಅತೀ ಹೆಚ್ಚು ಅಪೌಷ್ಟಿಕತೆಯಿರುವ ಮಕ್ಕಳ ತವರು ಭಾರತ ಎಂದು ವಿಶ್ವಸಂಸ್ಥೆ ವರದಿ ಪ್ರಕಟ ಮಾಡಿದ್ದು, ಮೋದಿಯವರ ಎನ್‌ಡಿಎ ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ಜಗತ್ತಿನಲ್ಲಿ ಅತೀ ಹೆಚ್ಚು ಅಪೌಷ್ಟಿಕತೆಯಿರುವ ಮಕ್ಕಳ ತವರು ಭಾರತ ಎಂದು ವಿಶ್ವಸಂಸ್ಥೆ ವರದಿ ಪ್ರಕಟ ಮಾಡಿದ್ದು, ಮೋದಿಯವರ ಎನ್‌ಡಿಎ ಸರ್ಕಾರ ಆಹಾರ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಸಿಪಿಐ (ಎಂ) ಗುರುವಾರ ಟೀಕಾ ಪ್ರಹಾರ ಮಾಡಿದೆ.

ಅಪೌಷ್ಟಿಕತೆಯ ಈ ಲೆಕ್ಕ ದೇಶಕ್ಕೆ ನಾಚಿಕೆಗೇಡು ಎಂದು ಸಿಪಿಎಂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಬುಧವಾರ ಸಂಶೋಧನಾ ವರದಿಯೊಂದನ್ನು ಪ್ರಕಟಿಸಿದ್ದು ಅದರಲ್ಲಿ ಭಾರತದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ 194.6 ಮಿಲಿಯನ್ ಇದೆ ಎಂದು ಹೇಳಿತ್ತು.

ಮೋದಿ ಸರ್ಕಾರ ಒಂದು ವರ್ಷ ಪೂರೈಸಿದುದರ ಆಚರಣೆ ವೇಳೆಯೇ ಎಫ್‌ಎಒ ವರದಿ ಬಿಡುಗಡೆ ಮಾಡಿದ್ದು, ದೇಶಕ್ಕೆ ನಾಚಿಕೆಗೇಡು ತಂದಿದೆ ಎಂದು ಸಿಪಿಎಂ ಹೇಳಿದೆ.

ಈ ವರದಿಯನ್ನು ಗಮನಿಸಿದರೆ, ಮೋದಿ ಸರ್ಕಾರ ಆಹಾರ ಭದ್ರತೆಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಸಿಪಿಎಂ ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯೆ ಬೃಂದಾ ಕಾರಾಟ್ ಹೇಳಿದ್ದಾರೆ.

ಇಂಥಾ ವಿಷಯಗಳ ಬಗ್ಗೆ  ಸರ್ಕಾರ ಮೌನ ವಹಿಸಿದ್ದು, ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿರುವುದಾಗಿ ಬೆನ್ನು ತಟ್ಟಿಕೊಳ್ಳುತ್ತಿದೆ ಎಂದು ಬೃಂದಾ ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com