ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸ್ ಮತ್ತು ತುರ್ತು ನೆರವು ವಾಹನ
ದೇಶ
ವಿಕಿರಣ ಸೋರಿಕೆ: ದೆಹಲಿಯಲ್ಲಿ ಟರ್ಕಿಶ್ ವಿಮಾನ ತುರ್ತು ಭೂಸ್ಪರ್ಶ
ಫೋರ್ಟಿಸ್ ಆಸ್ಪತ್ರೆಗೆ ತರಲಾಗುತ್ತಿದ್ದ ರೆಡಿಯೋ ಆ್ಯಕ್ಟಿವ್ ವಿಕಿರಣ ಸೋರಿಕೆಯಾದ ಪರಿಣಾಮ ಟರ್ಕಿಶ್ ವಿಮಾನ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ...
ನವದೆಹಲಿ: ಫೋರ್ಟಿಸ್ ಆಸ್ಪತ್ರೆಗೆ ತರಲಾಗುತ್ತಿದ್ದ ರೆಡಿಯೋ ಆ್ಯಕ್ಟಿವ್ ವಿಕಿರಣ ಸೋರಿಕೆಯಾದ ಪರಿಣಾಮ ಟರ್ಕಿಶ್ ವಿಮಾನ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಟರ್ಕಿಶ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸುವ ರೇಡಿಯೋ ಆ್ಯಕ್ಟಿವ್ ವಿಕಿರಣ ಉಪಕರಣ 10 ಪ್ಯಾಕೆಟ್ ಗಳನ್ನು ವಿಶೇಷ ಮೆಡಿಕಲ್ ಕಿಟ್ ನಲ್ಲಿ ತರಲಾಗುತ್ತಿತ್ತು. ಈ ಪೈಕಿ 4 ಪ್ಯಾಕ್ ಗಳ ವಿಕಿರಣ ಸೋರಿಕೆಯಾದ ಹಿನ್ನೆಲೆಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ.
ಸದ್ಯ ದೆಹಲಿ ವಿಮಾನ ನಿಲ್ದಾಣಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ(ಎನ್ಡಿಆರ್ಎಫ್) ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದೆ. ವಿಕಿರಣ ಸೋರಿಕೆಯಿಂದಾಗಿ ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾರವಣೆ ಸೃಷ್ಠಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ