
ನವದೆಹಲಿ: ಮೋದಿ ವಿರುದ್ಧ ವಾಗ್ಧಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇದೀಗ ಭೂ ಸುಗ್ರೀವಾಜ್ಞೆ ಕುರಿತಂತೆ ಮತ್ತೆ ಮೋದಿ ವಿರುದ್ಧ ಟೀಕಾಪ್ರಹಾರಕ್ಕೆ ಮುಂದಾಗಿದ್ದು, ರೈತರ ಭೂಮಿ ಕಸಿದುಕೊಳ್ಳಲು ಮೋದಿ ಕಾತುರದಲ್ಲಿದ್ದಾರೆ ಎಂದು ಶನಿವಾರ ಹೇಳಿದ್ದಾರೆ.
ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಿವಾದಿತ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಮೂರನೇ ಬಾರಿಗೆ ಮಂಡನೆ ಮಾಡಲು ಶಿಫಾರಸು ಮಾಡಿರುವ ಕುರಿತಂತೆ ಇಂದು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಪ್ರಧಾನಿ ಮೋದಿ ಭೂ ಮಸೂದೆ ಸುಗ್ರೀವಾಜ್ಞೆಯನ್ನು ಮೂರನೇ ಬಾರಿ ಮಂಡನೆ ಮಾಡುವ ಮೂಲಕ ರೈತರ ಭೂಮಿಯನ್ನು ಕಸಿದುಕೊಳ್ಳಲು ತರಾತುರಿಯಲ್ಲಿದ್ದಾರೆ. ಹಾಗಾಗಿಯೇ ಮೂರನೇ ಬಾರಿ ಮಂಡನೆ ಮಾಡಲು ಶಿಫಾರಸು ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಯಾವಾಗಲೂ ರೈತರ ಹಾಗೂ ಬಡವರ ಪರವಾಗಿದ್ದು, ತಿದ್ದುಪಡಿಯಾಗಿರುವ ಭೂ ಸ್ವಾಧೀನ ಸುಗ್ರೀವಾಜ್ಞೆ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸಲಿದೆ ಎಂದು ಹೇಳಿದ್ದಾರೆ.
Advertisement