ಎ.ರಾಜಾ
ದೇಶ
2ಜಿ ಹಗರಣ: ಸೋಮವಾರ ಅಂತಿಮ ವಿಚಾರಣೆ
2ಜಿ ತರಂಗಾಂತರ ಹಗರಣದ ಅಂತಿಮ ವಿಚಾರಣೆ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಆರಂಭವಾಗಲಿದೆ...
ನವದೆಹಲಿ: ಮಾಜಿ ಟೆಲಿಕಾಂ ಸಚಿವ ಎ.ರಾಜಾ, ಡಿಎಂಕೆ ಸಂಸದೆ ಕನ್ನಿಮೋಳಿ ಹಾಗೂ ಇತರ 17 ಮಂದಿ ಎದುರಿಸುತ್ತಿರುವ 2ಜಿ ತರಂಗಾಂತರ ಹಗರಣದ ಅಂತಿಮ ವಿಚಾರಣೆ ಇಲ್ಲಿನ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ಆರಂಭವಾಗಲಿದೆ.
ಕಳೆದ ವರ್ಷ ಏಪ್ರಿಲ್ 25ರಂದು ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ, ಹಣ ವರ್ಗಾವಣೆ ತಡೆ ಕಾಯ್ದೆಯಡಿ ಈ ಎಲ್ಲಾ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಚ್ ಶೀಟ್ ಸಲ್ಲಿಸಿತ್ತು.
ಮಾಜಿ ಸಚಿವ ಎ.ರಾಜಾ, ಸಂಸದೆ ಕನ್ನಿಮೋಳಿ, ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪತ್ನಿ ದಯಾಳು ಅಮ್ಮಳ್ ಹಾಗೂ ಇತರರು ಕಲೈನಗರ್ ಟಿವಿಯಲ್ಲಿ 200 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಇಟ್ಟಿರುವುದಾಗಿ ನ್ಯಾಯಾಲಯ ಆರೋಪಿಸಿತ್ತು. ಈ ಸಂಬಂಧ 14 ಮಂದಿ ಆರೋಪಿಗಳು ವಿಚಾರಣೆ ಎದುರಿಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ