
ಪುಣೆ: ಸಶಾಸ್ತ್ರ ಪಡೆಗಳಲ್ಲಿ ಯುದ್ಧ ಕಾರ್ಯಾಚರಣೆಗೆ ಮಹಿಳೆಯರನ್ನು ನೇಮಕ ಮಾಡಲಾಗುವುದು ಎಂಬ ಸುದ್ದಿಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಳ್ಳಿಹಾಕಿದ್ದಾರೆ. ಅವರ ಸುರಕ್ಷೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಯುದ್ಧದ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿ ಶತ್ರು ಪಡೆಗಳಿಗೆ ಸೆರೆಸಿಕ್ಕರೆ ಅವರ ಪರಿಸ್ಥಿತಿ ಏನಾಗಬಹುದು ಎಂದು ನೀವೇ ಯೋಚಿಸಿ ಎಂದಿರುವ ಸಚಿವರು, ಯುದ್ಧ ಹೊರತು ಪಡಿಸಿ ಉಳಿದ ಎಲ್ಲ ಕಾರ್ಯಾಚರಣೆಗಳಲ್ಲೂ ಮಹಿಳೆಯರು ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುವುದು ಎಂದಿದ್ದಾರೆ.
ಹಂತ ಹಂತವಾಗಿ ವಿವಿಧ ಕಾರ್ಯಾಚರಣೆಯಲ್ಲಿ ಮಹಿಳೆಯರನ್ನೂ ಸೇರ್ಪಡೆಗೊಳಿಸಲಾಗುವುದು ಎಂದೂ ತಿಳಿಸಿದ್ದಾರೆ.
Advertisement