ಸುಪ್ರೀಂ ಒಪ್ಪಿದರೆ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಸೌರಬ್ ಕಾಲಿಯಾ ಪ್ರಕರಣ: ಸುಷ್ಮಾ

ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದರೆ 1999 ರ ಕಾರ್ಗಿಲ್ ಸಂಘರ್ಷದ ವೇಳೆ ಪಾಕಿಸ್ತಾನ ಸೇನೆ ಚಿತ್ರಹಿಂಸೆಯಿಂದ ಸಾವನ್ನಪ್ಪಿದ ಭಾರತೀಯ ಸೇನೆ
ಕ್ಯಾಪ್ಟನ್ ಸೌರಬ್ ಕಾಲಿಯಾ
ಕ್ಯಾಪ್ಟನ್ ಸೌರಬ್ ಕಾಲಿಯಾ

ನವದೆಹಲಿ: ಸರ್ವೋಚ್ಚ ನ್ಯಾಯಾಲಯ ಅನುಮತಿ ನೀಡಿದರೆ 1999 ರ ಕಾರ್ಗಿಲ್ ಸಂಘರ್ಷದ ವೇಳೆ ಪಾಕಿಸ್ತಾನ ಸೇನೆ ಚಿತ್ರಹಿಂಸೆಯಿಂದ ಸಾವನ್ನಪ್ಪಿದ ಭಾರತೀಯ ಸೇನೆ ಕ್ಯಾಪ್ಟನ್ ಸೌರಬ್ ಕಾಲಿಯ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಂದುವರಿಸುವುದಾಗಿ  ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

ಕ್ಯಾಪ್ಟನ್ ಸೌರಬ್ ಕಾಲಿಯಾ ಪ್ರಕರಣದಲ್ಲಿ ಕೇಂದ್ರ ಎನ್ ಡಿಎ ಸರ್ಕಾರ ತನ್ನ ನಿಲುವು ಬದಲಿಸಿದ್ದು ಸುಪ್ರೀಂ ಕೋರ್ಟ್ ಸಮ್ಮತಿಸಿದರೆ ವಿಶೇಷ ಪ್ರಕರಣದಡಿ ನ್ಯಾಯಾಲಯದಲ್ಲಿ ಹೋರಾಟ ನಡೆಸುವುದಾಗಿ ಅವರು ತಿಳಿಸಿದ್ದಾರೆ.ಭಾರತ ಪಾಕಿಸ್ತಾನ ದೇಶಗಳು ಯುದ್ದ ವಿಚಾರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆ ಹೋಗಿ ನ್ಯಾಯ ಕೇಳುವ ಅವಕಾಶವಿದೆ ಎಂದು ಸುಷ್ಮಾ ಸ್ವರಾಜ್ ಮಾಹಿತಿ ನೀಡಿದರು.

ಭಾರತ-ಪಾಕಿಸ್ತಾನ ಕಾಮನ್ ವೆಲ್ತ್ ರಾಷ್ಟ್ರಗಳು. ಹೀಗಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದ ಮೆಟ್ಟಿಲು ಹತ್ತುವುದು ಸರಿಯಲ್ಲ ಎಂದು ಇದುವರೆಗೂ ಆಡಳಿತ ನಡೆಸಿದ ಎಲ್ಲಾ ಸರ್ಕಾರಗಳು ಹೇಳಿಕೊಂಡು ಬಂದಿವೆ ಎಂದು ಸುಷ್ಮಾ ತಿಳಿಸಿದರು. ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಪಾಕಿಸ್ತಾನ ವಿರುದ್ಧ ಪ್ರಕರಣವನ್ನು ಮುಂದುವರಿಸಲ್ಲ ಎಂದು ಈ ಹಿಂದೆ ಎನ್ ಡಿಎ ಸರ್ಕಾರ ತಿಳಿಸಿತ್ತು ಎಂದು ಸೌರಬ್ ಕಾಲಿಯಾ ಪೋಷಕರು ದೂರಿದ್ದರು.

ಪ್ರಕರಣ ಸಂಬಂಧ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಯಾವುದೇ ಹೋರಾಟ ನಡೆಸಲ್ಲ ಎಂದು ಯುಪಿಎ ಮತ್ತು ಎನ್ ಡಿ ಸರ್ಕಾರಗಳು ಸಂಸತ್ತಿನಲ್ಲಿ ತಿಳಿಸಿದ್ದವು. ಆದರೆ ಎನ್ ಡಿಎ ಸರ್ಕಾರ ಇದ್ದಕ್ಕಿದ್ದಂತೆ ತನ್ನ ನಿಲುವುಬದಲಾಯಿಸಿರುವುದು ಆಶ್ಚರ್ಯ ಮೂಡಿಸಿದೆ.

ಪಾಕ್ ವಿರುದ್ದ ಅಂತಾರಾಷ್ರ್ಟೀಯ ಕೋರ್ಟ್ ಮೆಟ್ಟಿಲೇರುವುದು 1972 ರ ಶಿಮ್ಲಾ ಒಪ್ಪಂದಕ್ಕೆ ವಿರುದ್ಧವಾಗಿದೆ ಎಂದು ಈ ಹಿಂದೆ ಅಧಿಕಾರದಲ್ಲಿದ್ದ ಯುಪಿ ಎ ಸರ್ಕಾರ 2013 ರಲ್ಲಿ ಸುಪ್ರಿಂ ಕೋರ್ಟ್ ನಲ್ಲಿ ತಿಳಿಸಿತ್ತು. ಈ ಸಂಬಂಧ ಪ್ರತಿಕ್ರಿಯಿಸಿರುವ ಸೌರಭ್ ಕಾಲಿಯಾ ತಂದೆ, ಯಾವುದೇ ರಾಜಕಾರಣಿಗಳ ಮಾತಿನಲ್ಲಿ ತಮಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ. ಎನ್ ಡಿ ಎ ಸರ್ಕಾರಕ್ಕೆ ದೇಶಭಕ್ತಿ ಹೆಚ್ಚು ಎಂದು ನಂಬಿದ್ದೇವು. ಆದರೆ ಆ ರೀತಿಯ ಯಾವುದೇ ಲಕ್ಷಣಗಳು ತಮ್ಮ ಮಗನ ಪ್ರಕರಣದಲ್ಲಿ ಕಾಣಿಸಿಲ್ಲ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com