ಪ್ರಶಸ್ತಿ ವಾಪಸ್ ನಿರ್ಧಾರ ಹುಚ್ಚಲ್ಲ

``ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡಿರುವ ಸಾಹಿತಿಗಳು ಹಾಗೂ ಕಲಾವಿದರದ್ದು ಹುಚ್ಚುತನದ ನಿರ್ಧಾರವಲ್ಲ. ದೇಶದಲ್ಲಾಗುತ್ತಿರುವ...
ಉಸ್ತಾದ್ ಅಮ್ಜದ್ ಖಾನ್
ಉಸ್ತಾದ್ ಅಮ್ಜದ್ ಖಾನ್

ಲಖನೌ/ನವದೆಹಲಿ: ``ತಮ್ಮ ಪ್ರಶಸ್ತಿಗಳನ್ನು ವಾಪಸ್ ನೀಡಿರುವ ಸಾಹಿತಿಗಳು ಹಾಗೂ ಕಲಾವಿದರದ್ದು ಹುಚ್ಚುತನದ ನಿರ್ಧಾರವಲ್ಲ. ದೇಶದಲ್ಲಾಗುತ್ತಿರುವ ಬೆಳವಣಿಗೆಗಳು ಅವರನ್ನು ನೋಯಿಸಿದೆ.''

ಹೀಗೆಂದು ಹೇಳಿದ್ದು ಸರೋದ್ ಮಾಂತ್ರಿಕ ಉಸ್ತಾದ್ ಅಮ್ಜದ್ ಅಲಿ ಖಾನ್. ಅಸಹಿಷ್ಣು ತೆಯಿಂದ ಬೇಸತ್ತು ಪ್ರಶಸ್ತಿ ವಾಪ್ಸಿ ಚಳವಳಿ ಆರಂಭಿಸಿರುವ ಸಾಹಿತಿಗಳು, ಕಲಾವಿದರಿಗೆ ಬೆಂಬಲ ವ್ಯಕ್ತಪಡಿಸಿರುವ ಖಾನ್, ``ಪ್ರಧಾನಿ ಮೋದಿ ಅವರ ಬಗ್ಗೆ ಜನರು ಬಹಳಷ್ಟು ಭರವಸೆಯಿಟ್ಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ಅವರು ಜನರ ನಂಬಿಕೆಯನ್ನು ಉಳಿಸಬೇಕಾಗಿದೆ'' ಎಂದು ಅಭಿಪ್ರಾಯಪಟ್ಟಿದ್ದಾರೆ.

ಲಖನೌನಲ್ಲಿ ಭಾನುವಾರ ಮಾತನಾಡಿದ ಅಮ್ಜದ್ ಅಲಿ ಖಾನ್, ``ಈಗೇನಾಗುತ್ತಿದೆಯೋ ಅದು ಬಹಳ ನೋವಿನ ಸಂಗತಿ.ನಾರಾಯಣಮೂರ್ತಿ ಅವರ ಸಂದರ್ಶನ ನೋಡುತ್ತಿದ್ದೆ. ಅವರ ಮಾತುಗಳಲ್ಲೂ ಕಳಕಳಿಯಿತ್ತು.ಒಟ್ಟಿನಲ್ಲಿ ಪರಿಸ್ಥಿತಿ ಸಹಜವಾಗಿಲ್ಲ.ಮೋದಿಜೀ ಅವರಿಗೆ ಸಾಕಷ್ಟು ಕೆಲಸ ಮಾಡುವ ಮನಸ್ಸಿದೆ. ಆದರೆ, ಅವರ ಸುತ್ತಲೂ ಇರುವವರು ಮಾತ್ರ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಬಾಯಿ ಮುಚ್ಚಿಸಬೇಕಾದ ಕೆಲಸವನ್ನು ಮೋದಿಜೀ ಮಾಡಬೇಕು. ಇಲ್ಲದಿದ್ದರೆ, ದೇಶದಲ್ಲಿ ಶಾಂತಿಗೆ ಅಪಾಯವೆದುರಾಗಬಹುದು'' ಎಂದಿದ್ದಾರೆ.

ಸಾಹಿತಿಗಳು ಹುಚ್ಚರಲ್ಲ: ಪ್ರಶಸ್ತಿ ವಾಪಸ್ ಆಂದೋಲನದ ಬಗ್ಗೆಯೂ ಪ್ರತಿಕ್ರಿಯಿಸಿದ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಖಾನ್, ಎಲ್ಲೋ ಏನೋ ತಪ್ಪಾಗಿದೆ. ಅಕಾಡೆಮಿಗೆ 41 ಸಾಹಿತಿಗಳ ಪತ್ರ ಅಸಹಿಷ್ಣುತೆಗೆ ಪ್ರತಿಭಟನಾರ್ಥವಾಗಿ ಅಕಾಡೆಮಿ ಪ್ರಶಸ್ತಿಗಳನ್ನು ಮರಳಿಸಿರುವವರು ಸೇರಿದಂತೆ 41 ಮಂದಿ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಪತ್ರ ಬರೆದಿದ್ದು, ಪುನರ್‍ವಿಮರ್ಶೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ದ್ವೇಷ ಮತ್ತು
ಅಸಹಿಷ್ಣು ವಾತಾವರಣ ಹೆಚ್ಚುತ್ತಿರುವ ಈ  ವೇಳೆ ಅಕಾಡೆಮಿ ಪಾತ್ರ ಪುನರ್ ವಿಮರ್ಶೆ ಅಗತ್ಯ ಎಂದು ಸಾಹಿತಿಗಳು ಪ್ರತಿಪಾದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com