ನವದೆಹಲಿ: ಅಂತರಾಷ್ಟ್ರೀಯ ಸಮುದ್ರ ಗಡಿ ದಾಟಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ 18 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪಾಕಿಸ್ತಾನದ ನೌಕಾಪಡೆ ಅಂತರಾಷ್ಟ್ರೀಯ ಸಮುದ್ರ ಗಡಿ ದಾಟಿದ ಆರೋಪದ ಮೇಲೆ 18 ಮೀನುಗಾರರನ್ನು ಬಂಧಿಸಿ, ಮೂರು ಹಡಗುಗಳನ್ನು ವಶಪಡಿಸಿಕೊಂಡಿತ್ತು. ಮೀನುಗಾರರ ವಿರುದ್ಧ ದೇಶದ ಸಮುದ್ರ ಸಂಬಂಧಿ ಗಡಿ ಉಲ್ಲಂಘನೆ ಆರೋಪದ ಮೇಲೆ ಪ್ರಕರಣ ದಾಖಲಿಸಿತ್ತು.
ಆದರೆ, ಭಾರತೀಯ ಅಧಿಕಾರಿಗಳು ಪಾಕಿಸ್ತಾನ ಆರೋಪವನ್ನು ತಳ್ಳಿ ಹಾಕಿದೆ. ಭಾರತೀಯ ಮೀನುಗಾರರು ಗಡಿ ದಾಟಲಿಲ್ಲ. ಪಾಕಿಸ್ತಾನ ಸುಳ್ಳು ಆರೋಪದ ಮೇಲೆ ಅವರನ್ನು ಬಂಧಿಸಿದೆ ಎಂದು ಹೇಳಿದ್ದಾರೆ.