ಅಲಹಾಬಾದ್: ಭೂಗತ ಪಾತಕಿ ಛೋಟಾ ರಾಜನ್ ಬಂಧನವಾದ ಬೆನ್ನಲ್ಲೆ ಆತನ ಮೂವರು ಸಹಚರರನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯ ಪಡೆ(ಎಸ್ ಟಿಎಫ್) ಮಂಗಳವಾರ ಬಂಧಿಸಿದೆ.
ಛೋಟಾ ರಾಜನ್ ಗ್ಯಾಂಗ್ ನಲ್ಲಿದ್ದ ಮೂವರು ಶೂಟರ್ ಗಳನ್ನು ಬಂಧಿಸಲಾಗಿದೆ ಎಂದು ಎಸ್ ಟಿಎಫ್ ನ ಐಜಿ ಸುಜೀತ್ ಕುಮಾರ್ ದೃಢಪಡಿಸಿದ್ದಾರೆ.
ಮುಂಬೈ ಪೊಲೀಸರು ನನ್ನ ಮೇಲೆ ಸಾಕಷ್ಟು ದೌರ್ಜನ್ಯ ಎಸಗಿದ್ದಾರೆ. ಅವರನ್ನು ನಾನು ನಂಬುವುದಿಲ್ಲ ಎಂದು ಛೋಟಾ ರಾಜನ್ ಇಂದು ಬೆಳಿಗ್ಗೆ ಹೇಳಿಕೆ ನೀಡಿದ್ದ. 55ರ ಹರೆಯದ ಡಾನ್ ಛೋಟಾ ರಾಜನ್ ಮೇಲೆ ಕೊಲೆ, ಸುಲಿಗೆ, ಡ್ರಗ್ ಮಾಫಿಯಾ ಸೇರಿದಂತೆ ಸುಮಾರು 60 ಪ್ರಕರಣಗಳಿವೆ.