
ನವದೆಹಲಿ: ಉಬರ್ ಕಂಪನಿ ಟ್ಯಾಕ್ಸಿ ಚಾಲಕ ಶಿವಕುಮಾರ್ ಯಾದವ್ 25 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾಗಿದ್ದು, ದೆಹಲಿ ಕೋರ್ಟ್ ಮಂಗಳವಾರ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದೆ.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ್ದ ಕೋರ್ಟ್ ಅಕ್ಟೋಬರ್ 20ರಂದು ಚಾಲಕ ಶಿವಕುಮಾರ್ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿತ್ತು. ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ ಕೋರ್ಟ್, ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದೆ. ಈ ವೇಳೆ ಕೋರ್ಟ್ ಹಾಲ್ ನಲ್ಲಿ ಅಪರಾಧಿಯ ಪತ್ನಿ ಹಾಗೂ ಇಬ್ಬರು ಮಕ್ಕಳು ಉಪಸ್ಥಿತರಿದ್ದರು.
2014 ಡಿಸೆಂಬರ್ 5ರಂದು ರಾತ್ರಿ ತನ್ನ ಟ್ಯಾಕ್ಸಿ ಏರಿದೆ ಗುರ್ಗಾಂವ್ ಹಣಕಾಸು ಸಂಸ್ಥೆಯ ಮಹಿಳಾ ಎಕ್ಸಿಕ್ಯುಟಿವ್ ಮೇಲೆ ಚಾಲಕ ಶಿವಕುಮಾರ್ ದೆಹಲಿಯ ಹೊರವಲಯದಲ್ಲಿ ಅತ್ಯಾಚಾರ ಎಸಗಿದ್ದ. ಡಿಸೆಂಬರ್ 7ರಂದು ಮಥುರಾದಲ್ಲಿ ಆರೋಪಿ ಶಿವಕುಮಾರ್ ನನ್ನು ಪೊಲೀಸರು ಬಂಧಿಸಿದ್ದರು.
Advertisement