ಮಹಿಳಾ ಪ್ರಯಾಣಿಕರಿಗಾಗಿ ರಕ್ಷಣಾ ಆ್ಯಪ್ ಬಿಡುಗಡೆಗೆ ರೈಲ್ವೇ ಸಿದ್ಧತೆ

ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಕಿರುಕುಳಗಳನ್ನು ನಿಯಂತ್ರಿಸಲು ಮತ್ತು ಈ ನಿಟ್ಟಿನಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವ ಸಲುವಾಗಿ...
ಸುರೇಶ್ ಪ್ರಭು
ಸುರೇಶ್ ಪ್ರಭು
ನವದೆಹಲಿ: ಮಹಿಳೆಯರ ಮೇಲೆ ಆಗುವ ದೌರ್ಜನ್ಯ, ಕಿರುಕುಳಗಳನ್ನು ನಿಯಂತ್ರಿಸಲು ಮತ್ತು ಈ ನಿಟ್ಟಿನಲ್ಲಿ ಮಹಿಳೆಯರಿಗೆ ರಕ್ಷಣೆ ಒದಗಿಸುವ ಸಲುವಾಗಿ ಮಹಿಳೆಯರ ರಕ್ಷಣಾ ಆ್ಯಪ್‌ವೊಂದನ್ನು ಬಿಡುಗಡೆ ಮಾಡಲು ಭಾರತೀಯ ರೈಲ್ವೇ ಸಿದ್ಧತೆ ನಡೆಸಿದೆ.
ಈಗಾಗಲೇ ಪಶ್ಚಿಮ ರೈಲ್ವೇಯಲ್ಲಿ ಸಿಸಿಟಿವಿ ಸೌಕರ್ಯವಿದ್ದರೂ ಮಹಿಳೆಯರ ರಕ್ಷಣೆಗಾಗಿ ಮೊಬೈಲ್ ಆ್ಯಪ್ ಒಂದನ್ನು ಬಿಡುಗಡೆ ಮಾಡಿದೆ. ಅದೇ ರೀತಿ ದೇಶಾದ್ಯಂತ ಎಲ್ಲ ರೈಲು ವಿಭಾಗಗಳಲ್ಲಿಯೂ ಈ ರೀತಿಯ ಮೊಬೈಲ್ ಆ್ಯಪ್‌ಗಳನ್ನು ಬಿಡುಗಡೆ ಮಾಡಲು ರೈಲ್ವೇ ಚಿಂತಿಸುತ್ತಿದೆ ಎಂದು ರೇಲ್ವೇ ಸಚಿವ ಸುರೇಶ್ ಪ್ರಭು ಹೇಳಿದ್ದಾರೆ.
ರೇಲ್ವೆಯಲ್ಲಿ ಮಹಿಳೆಯರು ಕಿರುಕುಳಕ್ಕೊಳಗಾಗಲು ಹೆಚ್ಚಿನ ಸಾಧ್ಯತೆಗಳಿರುವುದರಿಂದ ರೇಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಅದೇ ವೇಳೆ ತಾಂತ್ರಿಕ ರೀತಿಯಲ್ಲಿಯೂ ಆರ್‌ಪಿಎಫ್ ಮುನ್ನಡೆಯಬೇಕಾಗಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಹತ್ತಿಕ್ಕಲು ಆರ್ ಪಿಎಫ್ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಭು ಹೇಳಿದ್ದಾರೆ.
ಅದೇ ವೇಳೆ ರೈಲುಗಳಲ್ಲಿ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣ ಮಾಡುವವರನ್ನು ಪತ್ತೆ ಹಚ್ಚಲು ಕೂಡಾ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com