ಶೀಘ್ರದಲ್ಲೇ ಮಹಿಳಾ ಸುರಕ್ಷಾ ಅಪ್ಲಿಕೇಶನ್: ರೈಲ್ವೇ ಇಲಾಖೆ

ಮಹಿಳಾ ಪ್ರಯಾಣಿಕರ ವಿರುದ್ಧ ನಡೆಯುತ್ತಿರುವ ಅತ್ಯಾಚಾರ ಮತ್ತು ಪ್ರಾಣಹಾನಿಯನ್ನು ನಿಯಂತ್ರಿಸುವ ಸಲುವಾಗಿ ರೈಲ್ವೇ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮಹಿಳಾ ಪ್ರಯಾಣಿಕರ ವಿರುದ್ಧ ನಡೆಯುತ್ತಿರುವ ಅತ್ಯಾಚಾರ ಮತ್ತು ಪ್ರಾಣಹಾನಿಯನ್ನು ನಿಯಂತ್ರಿಸುವ ಸಲುವಾಗಿ ರೈಲ್ವೇ ಇಲಾಖೆ ಶೀಘ್ರದಲ್ಲಿಯೇ ಹೊಸ ಮೊಬೈಲ್ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಲಿದೆ. 
ರೈಲ್ವೇ ರಕ್ಷಣಾ ಪಡೆ ಇದಕ್ಕೆ ಚಾಲನೆ ನೀಡಲಿದ್ದು, ಇದರಿಂದ ಸಂಕಷ್ಟದ ಸಮಯದಲ್ಲಿ ತಕ್ಷಣ ಆ್ಯಪ್ ಮೂಲಕ ನೆರವು ಕೋರಬಹುದಾಗಿದೆ. ಈ ಸೇವೆ ಭಾರತದಾದ್ಯಂತ ಒದಗಲಿದೆ ಎಂದು ಸಚಿವ ಸುರೇಶ್ ಪ್ರಭು ತಿಳಿಸಿದ್ದಾರೆ. 
``ಪಶ್ಚಿಮ ರೈಲ್ವೆಯ ಕೆಲವು ವಲಯ ವಿಭಾಗಗಳು ಈಗಾಗಲೇ ಸ್ಥಳೀಯ ವ್ಯಾಪ್ತಿಗಾಗಿ ಮೊಬೈಲ್ ಅಪ್ಲಿಕೇಶನ್ ಬಳಸುತ್ತಿವೆ. ಸಿಸಿಟಿವಿಗಳೂ ಎಲ್ಲೆಡೆ ಕಾರ್ಯನಿರ್ವಹಿಸುತ್ತಿವೆ. ಈ ವ್ಯವಸ್ಥೆ ಸದ್ಯದಲ್ಲಿ ಇಡೀ ದೇಶಕ್ಕೆ ವಿಸ್ತರಿಸಲಾಗುತ್ತದೆ'' ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com