ಹುಬ್ಬಳ್ಳಿ: ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪ್ರಮುಖರು ಬರುವುದಾದರೆ ತಾವೂ ಪ್ರಧಾನಿ ಬಳಿಗೆ ತೆರಳಿ ಮಹದಾಯಿ ವಿಚಾರವಾಗಿ ಚರ್ಚಿಸುವುದಾಗಿ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥಶ್ರೀ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಶ್ರೀಗಳು, ``ಎರಡೂ ಪಕ್ಷಗಳು ಆರೋಪ, ಪ್ರತ್ಯಾರೋಪ ಬಿಟ್ಟು, ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಬೇಕು. ಎರಡೂ ಪಕ್ಷಗಳು ಪ್ರಧಾನಿ ಬಳಿಗೆ ತೆರಳಲು ಸಮ್ಮತಿಸಿ ದರೆ, ನಾನೂ ಹೋಗಿ ಚರ್ಚಿಸುತ್ತೇನೆ.
ಕಾಂಗ್ರೆಸ್ಸಿನಿಂದ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜು ನ ಖರ್ಗೆ ಮತ್ತು ಬಿಜೆಪಿಯಿಂದ ಪ್ರಹ್ಲಾದ್ ಜೋಶಿ, ಜಗದೀಶ ಶೆಟ್ಟರ್ ಹಾಗೂ ಕೇಂದ್ರದ ಒಬ್ಬ ಸಚಿವರು ಬಂದರೆ ಸಾಕು,'' ಎಂದರು.