ರಾಷ್ಟ್ರೀಯ ಪ್ರಶಸ್ತಿ ವಾಪಸ್ ಮಾಡಿದ ಆರುಂಧತಿ ರಾಯ್

ಬೂಕರ್ ಪ್ರಶಸ್ತಿ ಪಡೆದಿರುವ ಆರುಂಧತಿ, ಉತ್ತಮ ಚಿತ್ರಕತೆಗಾಗಿ ತಮಗೆ ಲಭಿಸಿರುವ ರಾಷ್ಟ್ರೀಯ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ...
ಆರುಂಧತಿ ರಾಯ್
ಆರುಂಧತಿ ರಾಯ್
ನವದೆಹಲಿ: ಪ್ರಶಸ್ತಿ ವಾಪಸ್ ಮಾಡುತ್ತಿರುವ ಸಾಹಿತಿ, ಕಲಾವಿದರ ಪಟ್ಟಿಗೆ ಈಗ ಖ್ಯಾತ ಲೇಖಕಿ ಆರುಂಧತಿ ರಾಯ್ ಸೇರ್ಪಡೆಯಾಗಿದ್ದಾರೆ.
ಬೂಕರ್ ಪ್ರಶಸ್ತಿ  ಪಡೆದಿರುವ ಆರುಂಧತಿ, ಉತ್ತಮ ಚಿತ್ರಕತೆಗಾಗಿ ತಮಗೆ ಲಭಿಸಿರುವ ರಾಷ್ಟ್ರೀಯ ಪ್ರಶಸ್ತಿಯನ್ನು ವಾಪಸ್ ಮಾಡಿದ್ದಾರೆ.
1989ರಲ್ಲಿ ಇನ್ ವಿಚ್ ಆನಿ ಗಿವ್ಸ್ ಇಟ್ ದೋಸ್ ಒನ್ಸ್ ಎಂಬ ಚಿತ್ರದ ಚಿತ್ರಕತೆಗಾಗಿ ಆರುಂಧತಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿತ್ತು.
ಆದಾಗ್ಯೂ, ಅಸಹಿಷ್ಣುತೆ ಎಂಬ ಪದವನ್ನು ಇಲ್ಲಿ ತಪ್ಪಾಗಿ ಬಳಸಲಾಗುತ್ತಿದೆ. ಇಲ್ಲಿ ನಡೆಯುತ್ತಿರುವ ಹತ್ಯೆಗಳು ಒಳಬೇಗುದಿಯ ಲಕ್ಷಣಗಳಷ್ಟೇ. ಅದೇ ವೇಳೆ ಪ್ರಶಸ್ತಿ ವಾಪಸಾತಿ ಎಂಬುದು ಸೈದ್ದಾಂತಿಕ ದುರ್ನೀತಿ ಮತ್ತು ಬೌದ್ಧಿತ ದೌರ್ಜನ್ಯವನ್ನು  ಪ್ರತಿಭಟಿಸಿ ಸಾಹಿತಿಗಳು, ಸಿನಿಮಾದವರು ಮತ್ತು ವಿದ್ವಾಂಸರು ಮಾಡುವ ರಾಜಕೀಯ  ಚಳವಳಿ ಎಂದು ರಾಯ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com