ಅ.26ರಿಂದ ಕರ್ನಾಟಕ, ಗೋವಾ, ಪಂಜಾಬ್ ನಲ್ಲಿ ನೆಸ್ಲೆ ಕಂಪೆನಿ ಮ್ಯಾಗಿ ಉತ್ಪಾದನೆ ಆರಂಭಿಸಿದೆ. ಹೊಸ ಉತ್ಪನ್ನದಲ್ಲಿ ಸೀಸದ ಪ್ರಮಾಣ ಕಡಿಮೆ ಇದ್ದು, ಸೇವನೆಗೆ ಸುರಕ್ಷಿತವಾಗಿದೆ ಎಂದು ಸರಕಾರದ ಮಾನ್ಯತೆ ಪಡೆದಿರುವ ಮೂರು ಪ್ರಯೋಗಾಲಯಗಳು ಸ್ಪಷ್ಟಪಡಿಸಿವೆ. ಹೀಗಾಗಿ ಮ್ಯಾಗಿ ನೂಡಲ್ಸ್ ಮಸಾಲಾವನ್ನು ಮಾಸಾಂತ್ಯದೊಳಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ನೆಸ್ಲೆ ಕಂಪೆನಿ ಹೇಳಿತ್ತು.