ಗ್ರೀನ್ ಪೀಸ್ ಇಂಡಿಯಾ ನೋಂದಣಿ ರದ್ದು

ಆರ್ಥಿಕ ಲೆಕ್ಕಾಚಾರದಲ್ಲಿ ಮೋಸ ಮತ್ತು ಸುಳ್ಳು ದಾಖಲೆಗಳ ಆರೋಪದಡಿಯಲ್ಲಿ ಗ್ರೀನ್ ಪೀಸ್ ಇಂಡಿಯಾ ಎನ್‌ಜಿಒ...
ಗ್ರೀನ್ ಪೀಸ್ ಇಂಡಿಯಾ
ಗ್ರೀನ್ ಪೀಸ್ ಇಂಡಿಯಾ
Updated on
ನವದೆಹಲಿ:  ಆರ್ಥಿಕ ಲೆಕ್ಕಾಚಾರದಲ್ಲಿ ಮೋಸ ಮತ್ತು ಸುಳ್ಳು ದಾಖಲೆಗಳ ಆರೋಪದಡಿಯಲ್ಲಿ ಗ್ರೀನ್ ಪೀಸ್ ಇಂಡಿಯಾ ಎನ್‌ಜಿಒದ ನೋಂದಣಿಯನ್ನು ತಮಿಳ್ನಾಡಿನ ರಿಜಿಸ್ಟ್ರಾರ್ ಆಫ್ ಸೊಸೈಟೀಸ್  ರದ್ದು ಮಾಡಿದೆ.
ಕಳೆದ ವರ್ಷ ಗ್ರೀನ್ ಪೀಸ್ ಇಂಡಿಯಾಗೆ ವಿದೇಶದಿಂದ ಬರುವ ದೇಣಿಗೆಯನ್ನು ಪಡೆಯುವ ಅನುಮತಿಯನ್ನು ಮೋದಿ ಸರ್ಕಾರ ರದ್ದುಗೊಳಿಸಿತ್ತು.
ಇದೀಗ ಹೊಸ ಬೆಳವಣಿಗೆಯಲ್ಲಿ ತಮಿಳ್ನಾಡಿನಲ್ಲಿ ನೋಂದಣಿಯಾಗಿರುವ ಗ್ರೀನ್‌ಪೀಸ್ ಇಂಡಿಯಾದ ನೋಂದಣಿ ರದ್ದು ಮಾಡುವಂತೆ ಭಾರತ ಸರ್ಕಾರ ಆದೇಶಿದೆ.
ಪ್ರಸ್ತುತ ಎನ್‌ಜಿಒ ವಿದೇಶದಿಂದ ದೇಣಿಗೆ ಪಡೆಯುವ ಸರ್ಕಾರ ಆಕ್ಷೇಪ ವ್ಯಕ್ತ ಪಡಿಸಿತ್ತು.
ಆದಾಗ್ಯೂ, ತಾವೇನೂ ತಪ್ಪು ಮಾಡಿಲ್ಲ. ಇದೆಲ್ಲಾ ಸರ್ಕಾರದ ಕಿತಾಪತಿ ಎಂದು ಗ್ರೀನ್‌ಪೀಸ್ ಇಂಡಿಯಾ ಸೊಸೈಟಿ ಹೇಳಿಕೆ ನೀಡಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ನಾಯಕರು, ಸಂಯುಕ್ತ ರಾಷ್ಟ್ರದ ಕಾರ್ಯದರ್ಶಿಗಳು ನಮ್ಮ ಕೆಲಸವನ್ನು ಮೆಚ್ಚಿದ್ದಾರೆ. ಆದರೆ ಸರ್ಕಾರ ಈ ರೀತಿ ನೋಂದಣಿ ರದ್ದು ಮಾಡುವ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡುತ್ತಿದೆ ಎಂದು ಗ್ರೀನ್ ಪೀಸ್ ಇಂಡಿಯಾದ ಆಂತರಿಕ ವ್ಯವಹಾರಗಳ ನಿರ್ದೇಶಕಿ ವಿನುತಾ ಗೋಪಾಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com