ಬಹುಪತ್ನಿತ್ವ ಹಾಗೂ ಸ್ವಾರ್ಥಕ್ಕಾಗಿ ಮುಸ್ಲಿಂ ಪುರುಷರಿಂದ ಕುರಾನ್ ದುರ್ಬಳಕೆ : ಹೈಕೋರ್ಟ್ ಕಿಡಿ

ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದುವುದಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಮುಸಲ್ಮಾನ ಪುರುಷರು ಕುರಾನ್ ಪವಿತ್ರ ಗ್ರಂಥವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಹಮದಾಬಾದ್: ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ಹೊಂದುವುದಕ್ಕಾಗಿ ಮತ್ತು ಸ್ವಾರ್ಥಕ್ಕಾಗಿ ಮುಸಲ್ಮಾನ ಪುರುಷರು ಕುರಾನ್ ಪವಿತ್ರ ಗ್ರಂಥವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗುಜರಾತ್ ಹೈಕೋರ್ಟ್ ಕಿಡಿ ಕಾರಿದೆ.

ದೇಶವು ಸಮಾನ ನಾಗರಿಕ ಸಂಹಿತೆಯನ್ನು ಹೊಂದುವುದಕ್ಕೆ ಈಗ ಕಾಲ ಕೂಡಿ ಬರುತ್ತಿದೆ ಎಂದು ಹೇಳಿರುವ ಹೈಕೋರ್ಟ್ ದೇಶದ ಕಾನೂನು ಮತ್ತು ಸಂವಿಧಾನವನ್ನು ಉಲ್ಲಂಘನೆ ಮಾಡುವುದಕ್ಕೆ ಕಡಿವಾಣ ಹಾಕಲು ಸೂಚಿಸಿದೆ. ಆದಷ್ಟು ಶೀಘ್ರವೇ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬೇಕೆಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಒಂದಕ್ಕಿಂತ ಹೆಚ್ಚು ಪತ್ನಿಯನ್ನು ಹೊಂದುವ ಅಪರಾಧವನ್ನು ಶಿಕ್ಷಿಸುವ ಐಪಿಸಿಯ 494ನೇ ಸೆಕ್ಷನ್‌ಗೆ ಸಂಬಂಧಿಸಿದ ತೀರ್ಪನ್ನು ಪ್ರಕಟಿಸುವ ಸಂದರ್ಭದಲ್ಲಿ ಜಸ್ಟಿಸ್‌ ಜೆ ಬಿ ಪರ್ದಿವಾಲಾ ತಿಳಿಸಿದ್ದಾರೆ.

ತನ್ನ ಅನುಮತಿ ಇಲ್ಲದೆ ಪತಿ ಇನ್ನೊಬ್ಬಾಕೆಯನ್ನು ವಿವಾಹವಾಗಿರುವುದಾಗಿ ಆರೋಪಿಸಿ ಪತ್ನಿಯು ದಾಖಲಿಸಿದ ಎಫ್ ಐ ಆರ್‌ ಅನ್ನು ವಜಾಗೊಳಿಸುವಂತೆ ಕೋರಿ ಜಾಫ‌ರ್‌ ಅಬ್ಟಾಸ್‌ ಮರ್ಚಂಟ್‌ ಗುಜರಾತ್‌ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮುಸ್ಲಿಂ ಪುರುಷರು ನಾಲ್ಕು ಬಾರಿ ಮದುವೆಯಾಗುವ ಅವಕಾಶವಿದೆ; ಹಾಗಾಗಿ ತನ್ನ ವಿರುದ್ಧ ತನ್ನ ಪತ್ನಿಯು ದಾಖಲಿಸಿರುವ ಎಫ್ ಐ ಆರ್‌ ಗೆ ಕಾನೂನು ಸಿಂಧುತ್ವ ಇರುವುದಿಲ್ಲ; ಅಂತೆಯೇ ಅದನ್ನು ವಜಾ ಮಾಡಬೇಕು ಎಂದು ಜಾಫ‌ರ್‌ ಅವರು ಕೋರಿದ್ದರು.

"ಮುಸ್ಲಿಂ ಪುರುಷರು ಒಂದಕ್ಕಿಂತ ಹೆಚ್ಚು ಪತ್ನಿಯರನ್ನು ಹೊಂದುವ ಸಲುವಾಗಿ ಕುರಾನ್‌ ಅನ್ನು ತಪ್ಪಾಗಿ ಮತ್ತು ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ವಾರ್ಥಪರತೆಯಿಂದ ಅರ್ಥೈಸಿಕೊಳ್ಳುತ್ತಿದ್ದಾರೆ' ಎಂದು ಹೇಳಿದರು.ಮುಸ್ಲಿಂ ವೈಯಕ್ತಿಕ ಕಾನೂನು ಪತ್ನಿಯನ್ನು ಕ್ರೂರವಾಗಿ ನಡೆಸಿಕೊಳ್ಳುವುದಕ್ಕೆ, ಪತಿಯ ಮನೆಯಿಂದ ಆಕೆಯನ್ನು ಹೊರಗೆ ಹಾಕುವುದಕ್ಕೆ ಮತ್ತು ಅನಂತರ ಎರಡನೇ ಮದುವೆಯಾಗುವುದಕ್ಕೆ ಮುಸ್ಲಿಂ ಪುರುಷರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com