ಮೋದಿ ಜತೆ ಮೂಡೀಸ್ ವರದಿ ಪ್ರಸ್ತಾಪಿಸಲು ಬ್ರಿಟನ್ ಸರ್ಕಾರ ಸಿದ್ಧತೆ

ಅಸಹಿಷ್ಣುತೆ ಬಗ್ಗೆ ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಎತ್ತಿರುವ ಕಳವಳವು ಬ್ರಿಟನ್ ಪ್ರವಾಸದ ವೇಳೆಯೂ ಪ್ರಧಾನಿ ನರೇಂದ್ರ ಮೋದಿ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ಲಂಡನ್: ಅಸಹಿಷ್ಣುತೆ ಬಗ್ಗೆ ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಎತ್ತಿರುವ ಕಳವಳವು ಬ್ರಿಟನ್ ಪ್ರವಾಸದ ವೇಳೆಯೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಡಲಿದೆ. 
ಮೂಡೀಸ್ ನೀಡಿರುವ ಎಚ್ಚರಿಕೆ ಬಗ್ಗೆ ಪ್ರಧಾನಿ ಮೋದಿ ಅವರೊಂದಿಗೆ ಪ್ರಸ್ತಾಪಿಸುವುದಾಗಿ ಬ್ರಿಟನ್ ವಿದೇಶಾಂಗ ಸಚಿವ ಪಿsಲಿಪ್ ಹ್ಯಾಮಂಡ್ ಗುರುವಾರ ತಿಳಿಸಿದ್ದಾರೆ. 
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಹ್ಯಾಮಂಡ್, ಮೂಡೀಸ್ ನೀಡಿರುವ ಎಚ್ಚರಿಕೆಗೂ, ಪ್ರಧಾನಿ ಮೋದಿ ಅವರ ಅಭಿವೃದ್ಧಿ ಯೋಜನೆಗಳಿಗೂ, ವಿಶ್ವದ ಇತರೆ ದೇಶಗಳಿಗೆ ಭಾರತವು ಮುಕ್ತವಾಗುತ್ತಿರುವುದಕ್ಕೂ, ಭಾರತದ ಸುಸ್ಥಿರ ಅಭಿವೃದ್ಧಿಗೂ ಒಂದಕ್ಕೊಂದು ಸಂಬಂಧವಿದೆ. ಹಾಗಾಗಿ, ನಮ್ಮ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಖಂಡಿತಾ ಮೂಡೀಸ್ ನ ಕಳವಳವನ್ನು ಮೋದಿಯವರಲ್ಲಿ ಚರ್ಚಿಸುವ ಸಾಧ್ಯತೆಯಿದೆ'' ಎಂದಿದ್ದಾರೆ. 
ಭಾರತದಲ್ಲಿ ಅಸಹಿಷ್ಣುತೆ ವಾತಾವರಣ ಹೆಚ್ಚುತ್ತಿದೆ. ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ನಾಯಕರ ಬಾಯಿ ಮುಚ್ಚಿಸದಿದ್ದರೆ, ಭಾರತವು ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹತೆ ಕಳೆದುಕೊಳ್ಳಲಿದೆ ಎಂದು ಇತ್ತೀಚೆಗಷ್ಟೇ ಮೂಡೀಸ್ ಎಚ್ಚರಿಸಿತ್ತು. ಆದರೆ, ಈ ವರದಿಯನ್ನು ತಿರಸ್ಕರಿಸಿದ್ದ ಕೇಂದ್ರ ಸರ್ಕಾರ, ಇದು ಸಂಸ್ಥೆಯ ಕಿರಿಯರೊಬ್ಬರು ನೀಡಿದ ವರದಿಯಷ್ಟೆ ಎಂದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com