ವಿದೇಶಿಗರಿಗೆ ಬಾಡಿಗೆ ತಾಯಿ ನಿರ್ಬಂಧಕ್ಕೆ ಹೈಕೋರ್ಟ್ ತಡೆ

ವಿದೇಶಿಗರಿಗೆ ಬಾಡಿಗೆ ತಾಯಿಯಾಗುವುದನ್ನು ನಿರ್ಬಂಧಿಸಿ ಸರಕಾರ ಹೊರಡಿಸಿದ ಸುತ್ತೋಲೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂಬಯಿ: ವಿದೇಶಿಗರಿಗೆ ಬಾಡಿಗೆ ತಾಯಿಯಾಗುವುದನ್ನು ನಿರ್ಬಂಧಿಸಿ ಸರಕಾರ ಹೊರಡಿಸಿದ ಸುತ್ತೋಲೆಗೆ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ನ್ಯಾ.ರವಿ ದೇಶಪಾಂಡೆ ನೇತೃತ್ವದ ರಜಾ ಪೀಠ ಡಾ.ಕೌಶಲ್ ಕಡಮ್ ಮತ್ತು ಕೆಲವು ಫಲವತ್ತತಾ ಕೇಂದ್ರಗಳು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿ, ಈ ಆದೇಶ ನೀಡಿದೆ. ಈಗಾಗಲೇ ಅಂತಿಮ ಪ್ರಕ್ರಿಯೆಯಲ್ಲಿರುವ ವಿದೇಶಿ ದಂಪತಿಗೆ ಮಗುವನ್ನು ಪಡೆಯಲು ಅನುಮತಿ ನೀಡಿದೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆದೇಶದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಅಕ್ಟೋಬರ್ 27ರಂದು ಫಲವತ್ತತಾ ಕೇಂದ್ರಗಳ ವೈದ್ಯರಿಗೆ, ಬಾಡಿಗೆ ತಾಯಿ ಸೇವೆಯನ್ನು ಭಾರತೀಯ ದಂಪತಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಸೂಚನೆ ನೀಡಿತ್ತು.  ವಿದೇಶಿ ದಂಪತಿಗೆ ಈ ಅವಕಾಶ ಪಡೆಯಲು ಅನುವು ಮಾಡಿಕೊಡದಂತೆ ಸೂಚಿಸಿತ್ತು. ಈ ಸೂಚನೆಯನ್ನು ಪ್ರಶ್ನಿಸಿ ಹೈ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಈಗಾಗಲೇ ಬಾಡಿಗೆ ತಾಯಿಯಾಗುವ ಅಂತಿಮ ಪ್ರಕ್ರಿಯೆಯಲ್ಲಿದ್ದು, ಇನ್ನು ಕೇವಲ 15-20 ದಿನಗಳ ಚಿಕಿತ್ಸೆ ಅಗತ್ಯವಿರುವವರಿಗೆ ಈ ಸೂಚನೆ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com