ಧಾರ್ಮಿಕ ಅಸಹಿಷ್ಣುತೆ ವಿರುದ್ಧ ಪಾದಯಾತ್ರೆ: ಪ್ರಧಾನಿಗಳನ್ನು ಭೇಟಿ ಮಾಡಿದ ಕಲಾವಿದರು

ದೇಶಾದ್ಯಂತ ಧಾರ್ಮಿಕ ಅಸಹಿಷ್ಣುತೆ ವಿರುದ್ಧ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ...
ಪ್ರಧಾನಿಗಳೊಂದಿಗೆ ಸಂವಾದದಲ್ಲಿ ಕಲಾವಿದರ ನಿಯೋಗ
ಪ್ರಧಾನಿಗಳೊಂದಿಗೆ ಸಂವಾದದಲ್ಲಿ ಕಲಾವಿದರ ನಿಯೋಗ
Updated on

ನವದೆಹಲಿ: ದೇಶಾದ್ಯಂತ ಧಾರ್ಮಿಕ ಅಸಹಿಷ್ಣುತೆ ವಿರುದ್ಧ ಆಕ್ರೋಶ, ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಲಾವಿದರು, ಸಾಹಿತಿಗಳ ನಿಯೋಗದವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಭಾರತದ ಸಂಸ್ಕೃತಿ ಸಹಿಷ್ಣುತೆಗಿಂತ ಮೀರಿದಾಗಿದ್ದು, ಸ್ವೀಕಾರ ಮನೋಭಾವನೆ ನಮ್ಮಲ್ಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಭವನಕ್ಕೆ ಪಾದಯಾತ್ರೆ ಮೂಲಕ ತೆರಳಿದ ಬಾಲಿವುಡ್ ನ ಹಿರಿಯ ನಟ ಅನುಪಮ್ ಖೇರ್ ಅವರ ನೇತೃತ್ವದ ಸಾಹಿತಿಗಳು ಮತ್ತು ಕಲಾವಿದರ ನಿಯೋಗ ಸುಮಾರು 90 ಪ್ರಮುಖರ ಸಹಿ ಹಾಕಿದ ಮನವಿಯನ್ನು ಸಲ್ಲಿಸಿತು. ನಂತರ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ ನಿಯೋಗ ಮಾತುಕತೆ ನಡೆಸಿತು. ಈ ಸಂದರ್ಭದಲ್ಲಿ ಮಾತನಾಡಿದ ಅನುಪಮ್ ಖೇರ್, ಸಾಹಿತಿಗಳ ಅಸಹಿಷ್ಣುತೆ ವಿರೋಧಿ ಪ್ರತಿಭಟನೆ ದೇಶವನ್ನು ಕಗ್ಗತ್ತಲೆಗೆ ತಳ್ಳಲು ನಡೆಸುತ್ತಿರುವ ಪಿತೂರಿ ಎಂದು ಆರೋಪಿಸಿದ್ದಾರೆ.

ನಮ್ಮ ದೇಶದ ಒಂದು ವರ್ಗದ ಜನ ರಾಜಕೀಯ ದುರುದ್ದೇಶ ಇಟ್ಟುಕೊಂಡು ದೇಶದ ಉತ್ತಮ ಮನೋಭಾವನೆಯನ್ನು ಹಾಳು ಮಾಡಲು ಮತ್ತು ಪ್ರಧಾನ ಮಂತ್ರಿಗಳ ಅಭಿವೃದ್ಧಿ ಕೆಲಸಗಳನ್ನು ಕೆಡಿಸಲು ನಡೆಸುತ್ತಿರುವ ಕುತಂತ್ರ ಎಂದು ನಿಯೋಗದ ಸದಸ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ಸಚಿವಾಲಯ ಕಾರ್ಯಾಲಯದ ಹೇಳಿಕೆ ತಿಳಿಸಿದೆ.

ಪ್ರಧಾನಿಗಳ ಜೊತೆ ಮಾತುಕತೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅನುಪಮ್ ಖೇರ್, ಅಸಹಿಷ್ಣುತೆ ವಿಚಾರ ನಮ್ಮ ದೇಶದ ಘನತೆಯನ್ನು ಹಾಳುಮಾಡುತ್ತಿದೆ. ಯಾರಿಗಾದರೂ ಸಾಮಾಜಿಕ ವ್ಯವಸ್ಥೆ ಮೇಲೆ ಅಸಾಮಾಧಾನ, ಸಮಸ್ಯೆಗಳಿದ್ದರೆ ಅಂಥವರು ಪ್ರಧಾನ ಮಂತ್ರಿಗಳ ಜೊತೆ ನೇರವಾಗಿ ಬಂದು ಮಾತನಾಡಲಿ, ಅದು ಬಿಟ್ಟು ಸರ್ಕಾರವೇ ಅವರನ್ನು ಸಂಪರ್ಕಿಸಬೇಕೆಂಬ ಮನೋಭಾವನೆ ಸರಿಯಲ್ಲ ಎಂದು ಖೇರ್ ನುಡಿದರು.
ರಾಷ್ಟ್ರಪತಿಯವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ಅವರು, ನಮ್ಮ ಸಂವಿಧಾನವನ್ನು ಜಾತ್ಯತೀತ ಚೌಕಟ್ಟಿನೊಳಗೆ ರಚಿಸಲಾಗಿದೆ. ನಾವು ಅದನ್ನು ಗೌರವಿಸಬೇಕು. ಪ್ರಶಸ್ತಿಯನ್ನು ನೀಡುವುದು ಸರ್ಕಾರವಲ್ಲ. ಅದನ್ನು ದೇಶದ ಜನತೆ ನೀಡುವುದು ಎಂದು ರಾಷ್ಟ್ರಪತಿ ಹೇಳಿರುವುದಾಗಿ ಅನುಪಮ್ ಖೇರ್ ಹೇಳಿದರು. ತಮ್ಮ ಹೋರಾಟ ಭಾರತ ದೇಶದ ಪರವಾಗಿ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com