1950-80ರ ಕಾಲಾವಧಿಯಲ್ಲಿ ಭಗವಾನ್‌ಜಿ ಎಂಬ ಹೆಸರಿನಲ್ಲಿ ಉತ್ತರ ಪ್ರದೇಶದ ಫೈಸಾಬಾದ್‌ನಲ್ಲಿ ವಾಸವಿದ್ದ ಸನ್ಯಾಸಿ ಸುಭಾಷ್ ಚಂದ್ರ ಬೋಸ್ ಅವರೇ ಆಗಿದ್ದರು ಎಂದು ಧಾರ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಕೇಂದ್ರ ಸರ್ಕಾರ ಬೋಸ್ ಜತೆ ನಿರಂತರ ಸಂಪರ್ಕವನ್ನೂ ಕಲ್ಪಿಸಿಕೊಂಡಿದ್ದರು ಎಂಬ ವಿಷಯವನ್ನೂ ಧಾರ್ ಇಲ್ಲಿ ಉಲ್ಲೇಖಿಸಿದ್ದಾರೆ. ಕೇಂದ್ರ- ರಾಜ್ಯ ಸರ್ಕಾರಗಳ ಕೆಲವು ಯೋಜನೆಗಳ ಬಗ್ಗೆ ಸರ್ಕಾರ ಅವರಲ್ಲಿ ಸಲಹೆಗಳನ್ನೂ ಪಡೆಯುತ್ತಿತ್ತು ಎನ್ನಲಾಗುತ್ತಿದೆ.