ರೈಲ್ವೆ ಇಲಾಖೆ ದೀಪಾವಳಿ ಗಿಫ್ಟ್: ಅರ್ಧ ಗಂಟೆಗೆ ಮುನ್ನ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದು

ರೈಲು ಹೊರಡುವುದಕ್ಕೂ 30 ನಿಮಿಷ ಮೊದಲೂ ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಕಾಯ್ದಿರಿಸಿಕೊಳ್ಳುವ ವ್ಯವಸ್ಥೆಯನ್ನು ನವೆಂಬರ್ 12 ರಿಂದ ಜಾರಿಗೆ ತರಲಾಗುತ್ತಿದೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:  ರೈಲು ಹೊರಡುವುದಕ್ಕೂ 30 ನಿಮಿಷ ಮೊದಲೂ ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಕಾಯ್ದಿರಿಸಿಕೊಳ್ಳುವ ವ್ಯವಸ್ಥೆಯನ್ನು ನವೆಂಬರ್ 12 ರಿಂದ ಜಾರಿಗೆ ತರಲಾಗುತ್ತಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.

ಈ ಮೊದಲು ರೈಲು ಹೊರಡುವುದಕ್ಕೂ ಮುನ್ನ ಒಂದು ಬಾರಿ ಮಾತ್ರ ಕಾಯ್ದಿರಿಸಿದ ಆಸನಗಳ ಮಾಹಿತಿ ಪಟ್ಟಿ ಸಿದ್ಧಪಡಿಸಲಾಗುತ್ತಿತ್ತು. ಇದೀಗ ಎರಡು ಬಾರಿ ಸಿದ್ದಪಡಿಸಲಾಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ ಎಂದು ಹೇಳಿಕೊಂಡಿರುವ ರೈಲ್ವೆ ಇಲಾಖೆ, ಕಾಯ್ದಿರಿಸಿದ ಆಸನಗಳ ಮೊದಲ ಮಾಹಿತಿ ಪಟ್ಟಿಯನ್ನು ರೈಲು ಹೊರಡುವುದಕ್ಕಿಂತ ನಾಲ್ಕು ಗಂಟೆ ಮೊದಲು ಸಿದ್ದಪಡಿಸಲಾಗುವುದು ಎಂದು ಹೇಳಿದೆ.

ಆ ನಂತರ ಅಂತಿಮವಾಗಿ ಇನ್ನೊಂದು ಪಟ್ಟಿ ಸಿದ್ಧಪಡಿಸಲಾಗುತ್ತದೆ. ಕಾರಣ ಅಂತಿಮ 30 ನಿಮಿಷಗಳಿಗಿಂತ ಮೊದಲು ಆನ್​ಲೈನ್ ಅಥವಾ ಕೌಂಟರ್​ನಲ್ಲಿ ಕಾಯ್ದಿರಿಸಿಕೊಳ್ಳಬಹು ದಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com