

ಕೊಚ್ಚಿ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಕೇರಳ ವಿಧಾನಸಭಾ ಸ್ಪೀಕರ್ ತಮ್ಮನ್ನು ವಜಾಗೊಳಿಸುವ ಮುನ್ನಾ ದಿನವೇ ಶಾಸಕ ಸ್ಥಾನಕ್ಕೆ ಪಿ.ಸಿ.ಜಾರ್ಜ್ ಅವರು ರಾಜಿನಾಮೆ ನೀಡಿದ್ದಾರೆ.
ಜಾರ್ಜ್ ಅವರು ಇಂದು ಬೆಳಗ್ಗೆ ತಿರುವನಂತಪುರಂನಲ್ಲಿ ಸ್ಪೀಕರ್ ಎನ್.ಶಕ್ತನ್ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದರು.
ಕೊಟ್ಟಾಯಂ ಜಿಲ್ಲೆಯ ಪೂಂಜರ್‌ನಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಜಾರ್ಜ್ ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೇರಳ ಕಾಂಗ್ರೆಸ್ ಸ್ಪೀಕರ್ ಶಕ್ತನ್ ಅವರಿಗೆ ಶಿಫಾರಸು ಮಾಡಿತ್ತು. ಈ ಬಗ್ಗೆ ಸ್ಪೀಕರ್ ನಾಳೆ ನಿರ್ಧಾರ ತೆಗೆದುಕೊಳ್ಳಲಿದ್ದರು. ಆದರೆ ಅದಕ್ಕೂ ಮುನ್ನವೇ ಜಾರ್ಜ್ ಅವರು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
64 ವರ್ಷದ ಹಿರಿಯ ಕಾಂಗ್ರೆಸ್ ನಾಯಕ ಜಾರ್ಜ್ ಅವರು ಸಿಪಿಎಂ ನೇತೃತ್ವದ ಎಲ್‌ಡಿಎಫ್ ಸೇರುವ ಬಗ್ಗೆ ಚಿಂತನೆ ನಡೆಸಿದ್ದಾರೆ.
Advertisement