

ಮಥುರಾ: ‘ಭಾಯಿ ದೂಜ್‘ ಆಚರಣೆ ನಿಮಿತ್ತ ನವೆಂಬರ್ 13 ರಂದು ಮಥುರಾದ ಯಮುನಾ ನದಿ ದಂಡೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಪವಿತ್ರ ಸ್ನಾನ ಮಾಡಿದ್ದಾರೆ. 
ಭಾಯಿ ದೂಜ್ ಅಂಗವಾಗಿ  ಸಹೋದರನಿಗೆ ಸಹೋದರಿಯಿಂದ ಪವಿತ್ರ ಸ್ನಾನದ ಪದ್ಧತಿ ಆಚರಣೆಯಲ್ಲಿದ್ದು ಸಾವಿರಾರು ಸಹೋದರ- ಸಹೋದರಿಯರು ಪವಿತ್ರ ಸ್ನಾನ ಮಾಡಿದ್ದಾರೆ. ಯಮುನಾ ನದಿ ಯಮನ ಸಹೋದರಿಯಾಗಿದ್ದು,  ಹಿಂದೂ ಪುರಾಣಗಳಲ್ಲಿ ಉಲ್ಲೇಖವಾಗಿರುವ ಮೃತ್ಯು ದೇವತೆ(ಯಮ)ನನ್ನು ಒಲಿಸಿಕೊಳ್ಳಲು ಸಹೋದರ-ಸಹೋದರಿಯರು ಪವಿತ್ರ ಸ್ನಾನ ಮಾಡಬೇಕು ಎಂದು ಸ್ಥಳೀಯ ಧಾರ್ಮಿಕ ಮುಖಂಡ ಯಮುನಾ ದಾಸ್ ಹೇಳಿದ್ದಾರೆ. 
ಮಥುರಾದಲ್ಲಿ ಮಾತ್ರ ಸಹೋದರ- ಸಹೋದರಿಯರಿಗೆ ದೇವಾಲಯವಿದ್ದು, ಭಾಯಿ ದೂಜ್ ಆಚರಣೆಗಾಗಿ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ ದೇವಾಲಯದಲ್ಲಿ ವಿಶೇಶ ದೀಪಾಲಂಕರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
ಉತ್ತರ ಪ್ರದೇಶ ಸರ್ಕಾರದಿಂದ ಮತುರಾಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಅನಿವಾಸಿ ಭಾರತೀಯರೂ ಸೇರಿದಂತೆ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಮಥುರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದ್ದು, ವಿಶೇಷ ಧಾರ್ಮಿಕ ಆಚರಣೆ ಹಿನ್ನೆಲೆಯಲ್ಲಿ 56 ವಿಧದ ಆಹಾರ ಪದಾರ್ಥಗಳನ್ನು ತಯಾರಿಸಲಾಗಿದೆ. 
Advertisement