ಲಾಲು-ನಿತೀಶ್ ವಿರುದ್ಧ ಸ್ಪರ್ಧಿಸಿದ್ದಕ್ಕೆ ಕ್ಷಮೆ ಕೋರಿದ ಪಪ್ಪು ಯಾದವ್

ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ವಿರುದ್ಧ ಸ್ಪರ್ಧಿಸಿದ್ದಕ್ಕೆ ವಿಷಾದವಿದೆ
ಜನ ಅಧಿಕಾರ ಪಕ್ಷದ (ಜೆ ಎ ಪಿ) ಅಧ್ಯಕ್ಷ ಪಪ್ಪು ಯಾದವ್
ಜನ ಅಧಿಕಾರ ಪಕ್ಷದ (ಜೆ ಎ ಪಿ) ಅಧ್ಯಕ್ಷ ಪಪ್ಪು ಯಾದವ್

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್ ಜೆ ಡಿ ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ವಿರುದ್ಧ ಸ್ಪರ್ಧಿಸಿದ್ದಕ್ಕೆ ವಿಷಾದವಿದೆ ಎಂದಿದ್ದಾರೆ ಜನ ಅಧಿಕಾರ ಪಕ್ಷದ (ಜೆ ಎ ಪಿ) ಅಧ್ಯಕ್ಷ ಪಪ್ಪು ಯಾದವ್.

ಈ ಇಬ್ಬರು ಮುಖಂಡರ ಮತ್ತು ಲಾಲು ಮಕ್ಕಳ ವಿರುದ್ಧ ಕೆಟ್ಟ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಕ್ಷಮೆ ಕೋರುವುದಾಗಿ ಪಪ್ಪು ಯಾದವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ನಿತೀಶ್ ಮತ್ತು ಲಾಲು ವಿರುದ್ಧ ಹೋಗುವ ನಿರ್ಧಾರ ನಾನು ಮಾಡಿದ ದೊಡ್ಡ ತಪ್ಪು" ಎಂದು ಪಪ್ಪು ಯಾದವ್ ಟ್ವೀಟ್ ಮಾಡಿದ್ದಾರೆ.

ಆರ್ ಜೆ ಡಿ ಪಕ್ಷದಿಂದ ಉಚ್ಛಾಟಿತನಾಗಿದ್ದ ಸಂಸದ ಪಪ್ಪು ಯಾದವ್ ಜೆ ಎ ಪಿ ಸಂಸ್ಥಾಪನೆ ಮಾಡಿ ಸಮಾಜವಾದಿ ಪಕ್ಷ ಮತ್ತು ಇತರ ಸಣ್ಣ ಪಕ್ಷಗಳೊಡಗೂಡಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸುಮಾರು ೧೦೦ ಹೆಚ್ಚು ಕ್ಷೇತ್ರಗಳಲ್ಲಿ ಈ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಲಾಲು ಪ್ರಸಾದ್ ಯಾದವ್ ಮಕ್ಕಳು ಚುನಾವಣೆ ಗೆದ್ದರೆ ಸಕ್ರಿಯ ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದ ಪಪ್ಪು "ಇಂತಹ ಹೇಳಿಕೆ ನೀಡಿದ್ದಕ್ಕೆ ಕ್ಷಮೆ ಕೋರುತ್ತೇನೆ" ಎಂದಿದ್ದಾರೆ.

ಬಿಜೆಪಿ ಪಕ್ಷವನ್ನು ದಯನೀಯವಾಗಿ ಸೋಲಿಸಿದ ಲಾಲು ಮತ್ತು ನಿತೀಶ್ ಜೋಡಿಯ ಮಹಾ ಮೈತ್ರಿಯ ಅಪಾರ ಜನ ಬೆಂಬಲ ಹಾಗೆಯೇ ಉಳಿದಿದೆ ಎಂದು ಪಪ್ಪು ಒಪ್ಪಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com