ಮ್ಯಾಗಿ ಬಳಕೆಗೆ ಸಿದ್ಧಗೊಳ್ಳದ ಮಹಾರಾಷ್ಟ್ರ, ಮತ್ತೆ ನಿಷೇಧಕ್ಕೆ ಚಿಂತನೆ

ಐದು ತಿಂಗಳ ನಿಷೇಧದ ಬಳಿಕ ಮತ್ತೆ ಮಾರುಕಟ್ಟೆಗೆ ಲಗ್ಗೆ ಹಿಟ್ಟ ಮ್ಯಾಗಿ ಸ್ನ್ಯಾಪ್ ಡೀಲ್ ಆನ್ ಲೈನ್ ನಲ್ಲಿ ಬಿಡುಗಡೆಯಾದ ಕೆಲ ಐದು ನಿಮಿಷದಲ್ಲೇ 60 ಸಾವಿರ ಮ್ಯಾಗಿ ಕಿಟ್...
ಮ್ಯಾಗಿ
ಮ್ಯಾಗಿ

ಮುಂಬೈ: ಐದು ತಿಂಗಳ ನಿಷೇಧದ ಬಳಿಕ ಮತ್ತೆ ಮಾರುಕಟ್ಟೆಗೆ ಲಗ್ಗೆ ಹಿಟ್ಟ ಮ್ಯಾಗಿ ಸ್ನ್ಯಾಪ್ ಡೀಲ್ ಆನ್ ಲೈನ್ ನಲ್ಲಿ ಬಿಡುಗಡೆಯಾದ ಕೆಲ ಐದು ನಿಮಿಷದಲ್ಲೇ 60 ಸಾವಿರ ಮ್ಯಾಗಿ ಕಿಟ್ ಗಳು ಮಾರಾಟವಾಗಿ ದಾಖಲೆ ನಿರ್ಮಿಸಿದ್ದು, ಈ ಮಧ್ಯೆ ಮಹಾರಾಷ್ಟ್ರ ಸರ್ಕಾರ ಮತ್ತೆ ಮ್ಯಾಗಿಯನ್ನು ನಿಷೇಧಿಸಲು ಚಿಂತನೆ ನಡೆಸಿದೆ.

ನಮ್ಮ ಕಾನೂನು ಇಲಾಖೆ ಎಲ್ಲಾ ಅಂಶಗಳನ್ನು ಪರೀಕ್ಷಿಸುತ್ತಿದ್ದು, ಸಾಧಕ-ಬಾಧಕ ಬಳಿಕ ಮ್ಯಾಗಿ ಮೇಲಿನ ನಿಷೇಧವನ್ನು ತೆರವು ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗಿರೀಶ್ ಬಾಪಟ್ ಹೇಳಿದ್ದಾರೆ.

ಮ್ಯಾಗಿಯ ಕೆಲವು ಬ್ಯಾಚ್‌ಗಳನ್ನು ಮಾತ್ರವೇ ಪರೀಕ್ಷೆ ಮಾಡಲಾಗಿದೆ. ಆದರೆ ಇತರ ಬ್ಯಾಚ್‌ಗಳಲ್ಲಿ ತಯಾರಾದ ಮ್ಯಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದು ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ‘ನೂಡಲ್ಸ್ ಮೇಲಿನ ನಿಷೇಧ ಮುಂದುವರಿಯಬೇಕು. ಕಾನೂನು ಅಭಿಪ್ರಾಯ ಪಡೆದು ಸುಪ್ರೀಂಕೋರ್ಟ್‌ ನಲ್ಲಿ ಪ್ರಶ್ನಿಸುತ್ತೇವೆ. ಸಾರ್ವಜನಿಕರ ಆರೋಗ್ಯವೇ ನಮಗೆ ಮುಖ್ಯ’ ಎಂದು ಅವರು ತಿಳಿಸಿದ್ದಾರೆ.

ಮಾನವ ಬಳಕೆಗೆ ಮ್ಯಾಗಿ ಯೋಗ್ಯವಲ್ಲ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಹೇಳಿದ ಬೆನ್ನಲ್ಲೆ ಮೊದಲ ಬಾರಿಗೆ ದೇಶದಲ್ಲಿ ಮಹಾರಾಷ್ಟ್ರ ಸರ್ಕಾರ ಮ್ಯಾಗಿಯನ್ನು ಬ್ಯಾನ್ ಮಾಡಿತ್ತು.

ಮ್ಯಾಗಿ ಮೇಲಿನ ಎಫ್‌ಎಸ್‌ಎಸ್‌ಎಐ ನಿಷೇಧವನ್ನು ಬಾಂಬೆ ಹೈಕೋರ್ಟ್‌ ಆ.13 ರಂದು ತೆರವುಗೊಳಿಸಿತು. ಮೂರು ಸರ್ಕಾರಿ ಪ್ರಯೋಗಾಲಯಗಳಲ್ಲಿ ಮ್ಯಾಗಿ ನೂಡಲ್ಸ್‌ ಪರೀಕ್ಷೆ ನಡೆಸಲಾಗಿತ್ತು. ಈ ಎಲ್ಲ ಪರೀಕ್ಷೆಗಳಲ್ಲಿ ಮ್ಯಾಗಿಯಲ್ಲಿ ಹಾನಿಕಾರಕ ಅಂಶಗಳಿಲ್ಲ ಎಂಬ ಫಲಿತಾಂಶ ಬಂದಿದೆ ಎಂದು ಅ.16 ರಂದು ನೆಸ್ಲೆ ಘೋಷಿಸಿತ್ತು. ಇದೀಗ ಕೆಲ ರಾಜ್ಯಗಳನ್ನು ಹೊರತುಪಡಿಸಿ ಮ್ಯಾಗಿ ನೂಡಲ್ಸನ್ನು ಮಾರುಕಟ್ಟೆಗೆ ಬಿಡಲಾಗಿದೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com