ಗಾಂಧೀಜಿ ಹತ್ಯೆ ಹಿಂದೆ ಕುತಂತ್ರ ನಡೆಸಿರುವ ವಾಸನೆ ಬರುತ್ತಿದೆ: ಸುಬ್ರಮಣಿಯನ್ ಸ್ವಾಮಿ

ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಅನೇಕ ವಿರೋಧಾಬಾಸಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೇಸ್ ಅನ್ನು ರಿ ಓಪನ್ ಮಾಡಬೇಕು ...
ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ

ನವದೆಹಲಿ: ರಾಷ್ಟ್ರಪಿತ  ಮಹಾತ್ಮಾ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಅನೇಕ ವಿರೋಧಾಬಾಸಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕೇಸ್ ಅನ್ನು ರಿ ಓಪನ್ ಮಾಡಬೇಕು ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ಗಾಂಧೀಜಿ ಹತ್ಯೆಯ ನಂತರ ಪ್ರಕಟವಾದ ಛಾಯಾಚಿತ್ರಗಳಲ್ಲಿ ಗಾಂಧೀಜಿ ಮೇಲೆ ಮೂರು ಬುಲೆಟ್ ಹಾರಿಸಲಾಗಿತ್ತು ಎಂದು ತೋರಿಸಲಾಗಿತ್ತು. ಆದರೆ ಹಂತಕ ನಾಥೂರಾಮ್ ಗೂಡ್ಸೆ ವಿಚಾರಣೆ ಸಂದರ್ಭದಲ್ಲಿ ಆತ ನಾನು ಎರಡು ಗುಂಡು ಮಾತ್ರ ಹಾರಿಸಿದ್ದು ಎಂದು ಹೇಳಿದ್ದ. ಮೂರನೇ ಗುಂಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿರುವ ಹತ್ಯೆಯ ಹಿಂದೆ ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಬ್ರಿಟಿಷ್ ಸೈನಿಕರು ಬಳಸುತ್ತಿದ್ದ ಇಟಲಿಯನ್ ಬೆರೆಟ್ಟಾ ಪಿಸ್ತೂಲ್ ನಿಂದ ಗಾಂಧೀಜಿ ಹತ್ಯೆಯಾಗಿತ್ತು ಎಂದು ತಿಳಿಸಿದ ಅವರು. ಶೂಟ್ ಮಾಡಿ ತಕ್ಷಣ ಏಕೆ ಗಾಂಧಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಜೊತೆಗೆ ಗಾಂಧೀಜಿ ಹತ್ಯೆಯ ನಂತರ ಮರಣೋತ್ತರ ಪರೀಕ್ಷೆ ಕೂಡ ನಡೆಸಲಿಲ್ಲ ಎಂದು ಹೇಳಿರುವ ಸುಬ್ರಮಣಿಯನ್ ಸ್ವಾಮಿ ಶೀಘ್ರವೇ ಗಾಂಧೀಜಿ ಹತ್ಯೆ ಪ್ರಕರಣವನ್ನು ರಿ ಓಪನ್ ಮಾಡುವಂತೆ ಎನ್ ಡಿ ಎ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com