ಹಿಂದೂಗಳು ಶಾಂತಿ ಬಯಸುತ್ತಾರೆ ಎಂಬುದು ಬಿಹಾರ ಚುನಾವಣೆಯಿಂದ ಸಾಬೀತು: ದಲೈಲಾಮಾ

ಭಾರತ ಶಾಂತಿಪ್ರಿಯ ದೇಶ, ಭಾರತೀಯರು ಅಹಿಂಸಾ ತತ್ವದಲ್ಲಿ ನಂಬಿಕೆ ಇರಿಸಿದ್ದಾರೆ ಎಂಬುದು ಬಿಹಾರ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ ....
ದಲೈ ಲಾಮಾ
ದಲೈ ಲಾಮಾ

ಜಲಂಧರ್ :ಭಾರತ ಶಾಂತಿಪ್ರಿಯ ದೇಶ, ಭಾರತೀಯರು ಅಹಿಂಸಾ ತತ್ವದಲ್ಲಿ ನಂಬಿಕೆ ಇರಿಸಿದ್ದಾರೆ ಎಂಬುದು ಬಿಹಾರ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಹೇಳಿದ್ದಾರೆ.

ಭಾರತ ಪ್ರಾಚೀನ ಕಾಲದಿಂದಲೂ ಸಂಪ್ರದಾಯ, ಶಾಂತಿ, ಅನ್ಯೋನ್ಯತೆಗೆ ಹೆಸರಾಗಿರುವ ದೇಶ ಎಂದ ಅವರು ಧಾರ್ಮಿಕ ಸಹಿಷ್ಣುತೆ ಎಂದರೆ ಕೇವಲ ಧರ್ಮಕ್ಕೆ ಮಾತ್ರ ಗೌರವ ಕೊಡದುವುದಲ್ಲ, ವಿವಿಧ ಧರ್ಮಗಳ ಜನತೆಗೆ ಸಮಾನವಾದ ಗೌರವ ತೋರುವುದಾಗಿದೆ ಎಂದು ದಲೈ ಲಾಮಾ ಹೇಳಿದ್ದಾರೆ.

ಭಾರತ ಗುರುವಿನ ಸ್ಥಾನದಲ್ಲಿದೆ. ಎಲ್ಲಾ ಬೌದ್ಧರು ಭಾರತದ ಶಿಷ್ಯರು ಎಂದು ಹೇಳಿದ್ದಾರೆ.  ಇನ್ನು ಭಯತ್ಪಾದಕತೆ ಬಗ್ಗೆ ಮಾತನಾಡಿದ ದಲೈ ಲಾಮಾ ಮೊದಲು ದೇಶದಲ್ಲಿ ನಾವು ಶಾಂತಿಯಿಂದ, ಸಹಬಾಳ್ವೆಯಿಂದ ಬಾಳುವಂತ ವಾತಾವರಣ ನಿರ್ಮಿಸಬೇಕು. ಧಾರ್ಮಿಕ ಸಹಿಷ್ಣುತೆ ಎಂಬುದನ್ನು ಮನೆಯಿಂದಲೇ ಆರಂಭಿಸಬೇಕು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com