
ಅಹಮದಾಬಾದ್ : ಗುಜರಾತ್ ನಲ್ಲಿ ಪಟೇಲ್ ಖೋಟಾಕ್ಕೆ ಮೀಸಲಾತಿ ಬೇಕೆಂದು ನಡೆದ ಪ್ರತಿಭಟನೆ, ಚಳುವಳಿ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇದೆ ಎಂದು ಗುಜರಾತ್ ಮುಖ್ಯಮಂತ್ರಿ ಆರೋಪಿಸಿದ್ದಾರೆ.
ಗುಜರಾತ್ ನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜಯಗಳಿಸಲು ಕಾಂಗ್ರೆಸ್ ಹರಸಾಹಸ ಪಡುತ್ತಿದೆ. ಹೀಗಾಗಿ ಹಲವು ವಿಧದ ತಂತ್ರಗಳನ್ನು ಅನುಸರಿಸುತ್ತಿದ್ದು. ಪಟೇಲ್ ಖೋಟಾ ಮೀಸಲಾತಿಗಾಗಿ ಹಲವರನ್ನು ಎತ್ತಿ ಕಟ್ಟಿದೆ ಎಂದು ಆನಂದಿ ಬೆನ್ ಪಟೇಲ್ ದೂರಿದ್ದಾರೆ.
ಸೂರತ್ ನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಟೇಲ್ ಸಮುದಾಯ ಮೀಸಲಾತಿ ಹಿಂದೆ ಕಾಂಗ್ರೆಸ್ ಕೈವಾಡವಿರುವುದು ಬಹಿರಂಗವಾಗಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು, ಕಾಂಗ್ರೆಸ್ ಮಾಡಿದಂತ ಕೆಲಸ ಮಾಡಬಾರದೆಂದು, ಕಾರ್ಯಕರ್ತರಲ್ಲಿ ಆನಂದಿ ಬೆನ್ ಪಟೇಲ್ ಮನವಿ ಮಾಡಿದರು.
ಕಳೆದ ಕೆಲ ತಿಂಗಳುಗಳ ಹಿಂದೆ ಪಟೇಲ್ ಸಮುದಾಯ ಮೀಸಲಾತಿಗಾಗಿ ಹಾರ್ದಿಕ್ ಪಟೇಲ್ ಗುಜರಾತಿನಾದ್ಯಂತ ಪ್ರತಿಭಟನೆ ನಡೆಸಿದ್ದರು
Advertisement