
ಮುಂಬೈ: ಮೇಯರ್ ಬಂಗಲೆಯಲ್ಲಿ ಶಿವಸೇನಾ ಸಂಸ್ಥಾಪಕ ದಿ.ಬಾಳ ಠಾಕ್ರೆ ಅವರ ಸ್ಮಾರಕ ನಿರ್ಮಾಣ ಮಾಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಮಂಗಳವಾರ ಹೇಳಿದ್ದಾರೆ.
ಬಾಳ ಠಾಕ್ರೆ ಅವರ ಸ್ಮಾರಕ ನಿರ್ಮಾಣದ ನಿರ್ಧಾರ ಪ್ರಕಟಿಸಿದ ಫಡ್ನವಿಸ್, 'ಬಾಳ ಸಾಹೇಬ್ ಅವರ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಇಡೀ ಮಹಾರಾಷ್ಟ್ರ ಬಯಸುತ್ತಿದೆ' ಎಂದರು.
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಹಾ ಸಿಎಂ, ಬಾಳ ಸಾಹೇಬ್ ಠಾಕ್ರೆ ಅವರ ಸ್ಮಾರಕಕ್ಕಾಗಿ ಮೇಯರ್ ಬಂಗಲೆ ಸ್ಥಳ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಮಹಾ ಸರ್ಕಾರದ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ ಅವರು, ಇದೊಂದು ಉತ್ತಮ ನಿರ್ಧಾರ ಮತ್ತು ಹಿಂದೂ 'ಹೃದಯ ಸಾಮ್ರಟ'ರಾದ ವೀರ್ ಸಾವರಕರ್ ಹಾಗೂ ಬಾಳ ಸಾಹೇಬ್ ಅವರ ಸ್ಮಾರಕಗಳು ಒಂದೇ ಕಡೆ ಇರುವುದ ಇನ್ನು ವಿಶೇಷ ಎಂದರು.
Advertisement