ಭಾರಿ ಮಳೆಗೆ ಆಂಧ್ರದಲ್ಲಿ ಮನೆ ಗೋಡೆ ಕುಸಿತ; 5 ಮಕ್ಕಳ ದಾರುಣ ಸಾವು

ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಆಂಧ್ರಪ್ರದೇಶದ ಅಕ್ಷರಶಃ ತತ್ತರಿಸಿದ್ದು...
ಗೋಡೆ ಕುಸಿತ
ಗೋಡೆ ಕುಸಿತ
ಕಡಪ: ಬಂಗಾಲಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಆಂಧ್ರಪ್ರದೇಶದ ಅಕ್ಷರಶಃ ತತ್ತರಿಸಿದ್ದು, ನಿರಂತರ ಮಳೆಯಿಂದಾಗಿ ಶಿಥಿಲಗೊಂಡ ಮನೆಯ ಗೋಡೆಯೊಂದು ಕುಸಿದ ಪರಿಣಾಮ ಐವರು ಮಕ್ಕಳಲು ಅಸುನೀಗಿದ್ದಾರೆ.
ಆಂಧ್ರ ಪ್ರದೇಶದ ಕಡಪ ಜಿಲ್ಲೆಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಶಿಥಿಲಗೊಂಡ ಮನೆಯ ಗೋಡೆಯೊಂದು ಮಲಗಿದ್ದ ಮಕ್ಕಳ ಮೇಲೆ ಬಿದ್ದಿದೆ. ಈ ವೇಳೆ ಐವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಮೂರು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 
ಆಂಧ್ರದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದ್ದು ಇಲ್ಲಿಯವರೆಗೂ ಸುಮಾರು 28 ಮಂದಿ ಸಾವನ್ನಪ್ಪಿದ್ದಾರೆ. ನೆಲ್ಲೂರು ಜಿಲ್ಲೆಯ ಸುಮಾರು 150ಕ್ಕೂ ಗ್ರಾಮಗಳು ಜಲಾವೃತಗೊಂಡಿದ್ದು, ಸಂಪರ್ಕ ಸಂಪೂರ್ಣ ಸ್ಧಗಿತವಾಗಿದೆ. 
ಮಳೆಯಿಂದಾಗಿ ನಲುಗಿರುವ ಆಂಧ್ರದ ನೆಲ್ಲೂರು ಕಡಪ ಚಿತ್ತೂರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ಡಿಆರ್ಎಫ್) ತಂಡಗಳು ಆಗಮಸಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com