ಸರ್ಕಾರ ಪುರುಷರ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಬೇಕಿದೆ: ಪುರುಷರ ಹಕ್ಕುಗಳ ಸಂಘಟನೆ ಆಗ್ರಹ

ನವೆಂಬರ್ 19 , ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ. ಮಹಿಳೆಯರ ಸಬಲೀಕರಣಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ ಇದೇ ಮಾದರಿ ಪುರುಷರ ಸಮಸ್ಯೆಗಳತ್ತ ಗಮನ ಹರಿಸಬೇಕು ಎಂದು ಪುರುಷರ ಹಕ್ಕುಗಳ ಸಂಘಟನೆ ಆಗ್ರಹಿಸಿದೆ.
ಪುರುಷರ ದಿನಾಚರಣೆ(ಸಾಂಕೇತಿಕ ಚಿತ್ರ)
ಪುರುಷರ ದಿನಾಚರಣೆ(ಸಾಂಕೇತಿಕ ಚಿತ್ರ)
Updated on

ನವದೆಹಲಿ: ನವೆಂಬರ್ 19 , ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ. ಮಹಿಳೆಯರ ಸಬಲೀಕರಣಕ್ಕೆ ಕ್ರಮ ಕೈಗೊಂಡಂತೆಯೇ ಪುರುಷರ ಸಮಸ್ಯೆಗಳತ್ತಲೂ ಗಮನ ಹರಿಸಬೇಕು ಎಂದು ಪುರುಷರ ಹಕ್ಕುಗಳ ಸಂಘಟನೆ ಆಗ್ರಹಿಸಿದೆ.
ಭಾರತಕ್ಕೆ ಸ್ವಾತಂತ್ರ್ಯ ಬಂದು 65 ವರ್ಷಗಳು ಕಳೆದಿದ್ದರೂ ಭಾರತ ಸರ್ಕಾರ ಪುರುಷರ ಸಾಮಾಜಿಕ ಹಾಗೂ ಖಾಸಗಿ ಜೀವನದ ಕುರಿತಾದ ಒಂದೇ ಒಂದೂ ಅಧ್ಯಯನ ನಡೆಸಿಲ್ಲ ಎಂದು ಬೆಂಗಳೂರು ಮೂಲದ ಪುರುಷರ ಹಕ್ಕುಗಳ ಸಂಘಟನೆ ಕಾರ್ಯಕರ್ತ ಕುಮಾರ್ ವಿ ಜಹಗಿರ್ದಾರ್ ಹೇಳಿದ್ದಾರೆ.
ವಿವಾಹವಾಗಿರುವ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ, 2013 ರಲ್ಲಿ ವಿವಾಹವಾಗಿರುವ 29 ,491 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 64 , 098 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಹರ್ಗಿರ್ದಾರ್ ಮಾಹಿತಿ ನೀಡಿದ್ದಾರೆ.
ಪುರುಷರು ಲಿಂಗ ಪಕ್ಷಪಾತಿ ಕಾನೂನುಗಳಿಗೆ ಬಲಿಪಶುಗಳಾಗುತ್ತಿದ್ದಾರೆ. ಪುರುಷರ ವಿರುದ್ಧ ಸುಳ್ಳು ವರದಕ್ಷಿಣೆ ಆರೋಪ ಕೇಳಿಬರುತ್ತಿದೆ, ಅಲ್ಲದೇ ಕಚೇರಿಗಳಲ್ಲೂ ಪುರುಷರ ವಿರುದ್ಧ ಸುಳ್ಳು ಆರೋಪ ಕೇಳಿಬರುತ್ತಿದ್ದು, ಲಿಂಗ-ತಟಸ್ಥ ಕಾನೂನುಗಳು ಜಾರಿಯಾಗಬೇಕಿದೆ ಎಂದು ಜಹರ್ಗಿರ್ದಾರ್ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com