
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಒಡೆತನದ ಬ್ರಿಟನ್ ನಲ್ಲಿರುವ ಶೆಲ್ ಕಂಪನಿಗೆ ಭಾರತೀಯ ರಕ್ಷಣಾ ಇಲಾಖೆ ಯಿಂದ ಕಿಕ್ ಬ್ಯಾಕ್ ನೀಡಲಾಗಿದೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಬ್ರಿಟನ್ ನಲ್ಲಿರುವ ಬ್ಯಾಕ್ ಕಾಪ್ ಎಂಬ ಕಂಪನಿಗೆ ರಕ್ಷಣಾ ಇಲಾಖೆ ಯಾವುದೋ ಡೀಲ್ ಸಂಬಂಧ ಕಾನೂನು ಬಾಹಿರವಾಗಿ ಕಮಿಷನ್ ನೀಡಿದೆ. ಹೀಗಾಗಿ ಜಾರಿ ನಿರ್ದೇಶಾನಲಯ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಇನ್ನು ಈ ಸಂಬಂಧ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಪತ್ರ ಬರೆದಿರುವ ಸುಬ್ರಮಣಿಯನ್ ಸ್ವಾಮಿ, ಭಾರತ ಪೌರತ್ವ ಪಡೆದಿರುವ ರಾಹುಲ್ ಗಾಂಧಿ ಸಂವಿಧಾನದ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
Advertisement