tomato
ದೇಶ
ದುಬಾರಿ ಆಯ್ತು ಟೊಮ್ಯಾಟೊ ಬೆಲೆ: ಕೆಜಿಗೆ 62 ರುಪಾಯಿ
ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಟೊಮ್ಯಾಟೊ ದರ ರು. 62ಕ್ಕೆ ಏರಿದೆ. ಒಂದು ತಿಂಗಳಲ್ಲಿ ದರ ಶೇ. 50ರಷ್ಟು ಏರಿಕೆ ಕಂಡಿದೆ...
ನವದೆಹಲಿ: ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಟೊಮ್ಯಾಟೊ ದರ ರು. 62ಕ್ಕೆ ಏರಿದೆ. ಒಂದು ತಿಂಗಳಲ್ಲಿ ದರ ಶೇ. 50ರಷ್ಟು ಏರಿಕೆ ಕಂಡಿದೆ.
ದೇಶಾದ್ಯಂತ ಎಲ್ಲ ನಗರಗಳಲ್ಲಿಯೂ ಸರಾಸರಿ ದರ ರು. 50 ಇದೆ. ಕಳೆದ ವಾರ ದಕ್ಷಿಣ ಭಾರತದಲ್ಲಿ ಹೆಚ್ಚಿನ ಮಳೆಯಾಗಿ ಬೆಳೆ ನಾಶ ಮತ್ತು ಸರಬರಾಜು ಸಮಸ್ಯೆಯಿಂದ ದರಗಳು ಏರಿದ್ದು, ಈ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಬುಧವಾರ ಉತ್ತನ ಮಟ್ಟದ ಸಭೆ ಕರೆದಿದೆ.


