
ನವದೆಹಲಿ: ಸುಪ್ರೀಂ ಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ತೀರ್ಥಸಿಂಗ್ ಠಾಕೂರ್ ಅವರು ಡಿಸೆಂಬರ್ 3ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರು ಡಿಸೆಂಬರ್ ಎರಡಕ್ಕೆ ನಿವೃತ್ತಿಯಾಗುತ್ತಿದ್ದು, ತಮ್ಮ ಸ್ಥಾನಕ್ಕೆ ನ್ಯಾ.ಟಿ.ಎಸ್. ಠಾಕೂರ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು. ಇದಕ್ಕೆ ಕೇಂದ್ರ ಕಾನೂನು ಇಲಾಖೆ ಅನಮೋದನೆ ನೀಡಿದೆ.
63 ವರ್ಷದ ಠಾಕೂರ್ ನೇತೃತ್ವದ ಸುಪ್ರೀಂ ಪೀಠ ಇತ್ತೀಚಿಗೆ ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿತ್ತು.
ಜನವರಿ 4, 1952ರಲ್ಲಿ ಜನಸಿದ ಠಾಕೂರ್ ಅವರು ಒಂದು ವರ್ಷಗಳ ಕಾಲ ಸಿಜೆಐಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜನವರಿ 4 2017ಕ್ಕೆ ನಿವೃತ್ತಿಯಾಗಲಿದ್ದಾರೆ.
Advertisement