ಭಯೋತ್ಪಾದಕ ಸಂಘಟನೆ ಜತೆ ಕಾಂಗ್ರೆಸ್ ನಂಟು: ಡಿಸಿಎಂ ಬಾದಲ್

ಖಲಿಸ್ತಾನ ಪ್ರತ್ಯೇಕವಾದಿಗಳ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಭಾಗಿಯಾಗಿದ್ದು, ಭಯೋತ್ಪಾದಕ ಸಂಘಟನೆಯೊಂದಿಗೆ ಕಾಂಗ್ರೆಸ್ ಗೆ ನಂಟಿದೆ ಎಂದು...
ಸುಖ್ಬೀರ್ ಸಿಂಗ್ ಬಾದಲ್
ಸುಖ್ಬೀರ್ ಸಿಂಗ್ ಬಾದಲ್
ನವದೆಹಲಿ: ಖಲಿಸ್ತಾನ ಪ್ರತ್ಯೇಕವಾದಿಗಳ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಭಾಗಿಯಾಗಿದ್ದು, ಭಯೋತ್ಪಾದಕ ಸಂಘಟನೆಯೊಂದಿಗೆ ಕಾಂಗ್ರೆಸ್ ಗೆ ನೇರ ನಂಟಿದೆ ಎಂದು ಪಂಜಾಬ್ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. 
ನವದೆಹಲಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಾದಲ್ ಅವರು, ಉಗ್ರರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಭಾಗಿಯಾಗಿದ್ದಾರೆ. ಈ ಮೂಲಕ ಉಗ್ರರ ಜತೆ ಕಾಂಗ್ರೆಸ್ ಗೆ ನಂಟಿದೆ ಎಂಬುದು ಬಯಲಾಗಿದೆ. ಸಭೆಯಲ್ಲಿ ಶಾಸಕರು ಭಾಗಿಯಾಗಿರುವ ವಿಡಿಯೋವನ್ನು ಸಹ ಬಾದಲ್ ಅವರು ಬಿಡುಗಡೆ ಮಾಡಿದ್ದಾರೆ. 
ಕಾಂಗ್ರೆಸ್ ಒಂದು ದೇಶ ವಿರೋಧಿ ಪಕ್ಷ. ಪಂಜಾಬ್ ಸೇರಿದಂತೆ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಕಾಂಗ್ರೆಸ್ ಮಹಾಮೈತ್ರಿಕೂಟವು ಭಯೋತ್ಪಾದಕರ ಜತೆಗಿದೆ ಎಂದು ಆರೋಪಿಸಿದ್ದಾರೆ.
ಅಮೃತಸರದಲ್ಲಿ ನಡೆದಿದ್ದ ಕಾಂಗ್ರೆಸ್ ರ್ಯಾಲಿ ವೇಳೆ ಖಲಿಸ್ತಾನ ಚಳುವಳಿಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿತ್ತು. ಅಲ್ಲದೆ ಖಲಿಸ್ತಾನದ ಬಾವುಟವನ್ನು ಹಾರಾಡಿಸಿತ್ತು ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com