ನೇಮಕಾತಿ, ಬೆಂಬಲ ಪಡೆಯಲು ಇಸೀಸ್ ಉಗ್ರರಿಂದ ವ್ಯಾಪಕ ಇಂಟರ್ ನೆಟ್ ಬಳಕೆ: ಮನೋಹರ್ ಪರಿಕ್ಕರ್

ಇಸ್ಲಾಮಿಕ್ ಸ್ಟೇಟ್ ಉಗ್ರರು ಇಂಟರ್ ನೆಟ್ ನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮನೋಹರ್ ಪರಿಕ್ಕರ್
ಮನೋಹರ್ ಪರಿಕ್ಕರ್

ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಉಗ್ರರು(ಇಸೀಸ್) ಇಂಟರ್ ನೆಟ್ ನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವುದರ ಬಗ್ಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ರಕ್ಷಣಾ ಇಲಾಖೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮನೋಹರ್ ಪರಿಕ್ಕರ್ ಉಗ್ರ ಸಂಘಟನೆಗೆ ನೇಮಕಾತಿ ಮಾಡಿಕೊಳ್ಳುವುದು ಹಾಗೂ ವ್ಯಾಪಕ ಬೆಂಬಲ ಗಳಿಸುವುದಕ್ಕಾಗಿ ಇಸೀಸ್ ಉಗ್ರರು ಅಂತರ್ಜಾಲವನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದಾರೆ. ಸೈಬರ್ ದಾಳಿಗಳನ್ನು ಎದುರಿಸಲು ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ ಎಂದಿದ್ದಾರೆ. ಪ್ಯಾರಿಸ್ ನಲ್ಲಿ ದಾಳಿ ನಡೆಸಿದ್ದ ಇಸೀಸ್ ಭಯೋತ್ಪಾದಕರು ತಮ್ಮ ಕೃತ್ಯದ ಬಗ್ಗೆ ಟ್ವೀಟ್ ನಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅಲ್ಲದೇ ಪ್ಯಾರಿಸ್ ದಾಳಿಯಲ್ಲಿ ನೂರಾರು ಜನ ಮೃತಪಟ್ಟಿರುವುದಕ್ಕೆ ಪ್ಯಾರಿಸ್ ಬರ್ನ್ಸ್(#parisburns ) ಎಂಬ ಹ್ಯಾಷ್ ಟ್ಯಾಗ್ ನೀಡಿ ಸಂಭ್ರಮಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com