ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಜ್ಯಸಭಾ ಟಿವಿಯಿಂದ ಇನ್ನು ಸಾಕ್ಷ್ಯಚಿತ್ರ, ಕಿರುಚಿತ್ರ ನಿರ್ಮಾಣ

ರಾಜ್ಯಸಭಾ ಟಿವಿ ಇನ್ನು ಮುಂದೆ ವಾಣಿಜ್ಯ ಮಾರುಕಟ್ಟೆಗೆ ಕಾಲಿಡಲಿದೆ. ರಾಷ್ಟ್ರೀಯ ಚಿಂತನೆಯ ಸಿನೆಮಾ ಹಾಗೂ ಟಿವಿ...
ನವದೆಹಲಿ: ರಾಜ್ಯಸಭಾ ಟಿವಿ ಇನ್ನು ಮುಂದೆ ವಾಣಿಜ್ಯ ಮಾರುಕಟ್ಟೆಗೆ ಕಾಲಿಡಲಿದೆ. ರಾಷ್ಟ್ರೀಯ ಚಿಂತನೆಯ ಸಿನೆಮಾ ಹಾಗೂ ಟಿವಿ ಸರಣಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲಿದ್ದು, ಈ ಕುರಿತು ಈಗಾಗಲೇ ಈ ರಂಗದ ದಿಗ್ಗಜರಾದ ಶ್ಯಾಮ್ ಬೆನಗಲ್, ತಿಗ್ಮಾಂಶು ಧೂಲಿಯಾ ಮತ್ತು ವಿನಯ್ ಶುಕ್ಲಾ ಮುಂತಾದವರೊಂದಿಗೆ ಮಾತುಕತೆ ನಡೆಸಿದೆ. 
ಸುಭಾಷ್ ಚಂದ್ರ ಬೋಸ್, ವಲ್ಲಭ ಭಾಯ್ ಪಟೇಲ್, ಸೇನೆಯ ಚರಿತ್ರೆಯ ಕುರಿತ ಪಿsಲಂಗಳು, ಸ್ವಾತಂತ್ರ್ಯ ಚಳವಳಿಯ ಅಜ್ಞಾತ ಸಂಗತಿಗಳು, ಭಾಷೆಯಾಗಿ ಮತ್ತು ರಾಜಕೀಯ ಚಳವಳಿಯಾಗಿ ಹಿಂದಿಯ ಬೆಳವಣಿಗೆ ಮುಂತಾದ ಸರಣಿಗಳು ಅದು ಯೋಜಿಸಿರುವ ಕಾರ್ಯಕ್ರಮಗಳಲ್ಲಿ ಕೆಲವು. 
ರಾಜ್ಯ ಸಭೆಯ ಅಧೀನದಡಿಯಲ್ಲಿ ಬರುವ ಈ ಟಿವಿ ವಾಹಿನಿ, ಮಾಹಿತಿ ಮತ್ತು ಪ್ರಸಾರ ಇಲಾಖೆಯ ಆಡಳಿತದಲ್ಲಿಲ್ಲದಿರುವುದರಿಂದ ಸರ್ಕಾರದ ನೇರ ಅಧೀನದಲ್ಲಿಲ್ಲ. ಇದರ ಆದಾಯ ದೇಶದ ಸಮಗ್ರ ನಿಧಿಗೆ ಸೇರುತ್ತದೆ. ತನ್ನ ಕಾರ್ಯಕ್ರಮಗಳನ್ನು ಮಾರುವ ಮೂಲಕ ಆದಾಯ ಪಡೆಯುವ ಹಕ್ಕನ್ನು ಅದು ಇತ್ತೀಚೆಗೆ ಪಡೆದಿದೆ. 
``ನಾವು ನಿರ್ಮಿಸಲಿರುವ ಚಿತ್ರಗಳು, ಸಾಕ್ಷ್ಯಚಿತ್ರಗಳು, ಸರಣಿಗಳನ್ನು ಇತರ ವಾಹಿನಿಗಳಿಗೆ ಮಾರಲಿದ್ದೇವೆ ಮತ್ತು ಥಿಯೇಟರ್ ಗಳಿಗೆ ನೀಡಲಿದ್ದೇವೆ'' ಎಂದು ರಾಜ್ಯಸಭಾ ಟಿವಿಯ ಕಾರ್ಯನಿರ್ವಹಣಾಧಿಕಾರಿ ಗುರ್‍ದೀಪ್ ಸಿಂಗ್ ಸಪ್ಪಲ್ ಇಂಡಿಯನ್ ಎಕ್ಸ್‍ಪ್ರೆಸ್‍ಗೆ ಹೇಳಿದ್ದಾರೆ. ಅದಕ್ಕಾಗಿಯೇ ಅದು ಪ್ರತ್ಯೇಕ ಬ್ಯಾಂಕ್ ಖಾತೆಯನ್ನೂ ಹೊಂದಿದೆ.
ಬೋಸ್ ಕುರಿತ 6 ಕಂತುಗಳ ಸರಣಿಯನ್ನು ಧೂಲಿಯಾ, ಪಟೇಲ್ ಕುರಿತು 10 ಕಂತುಗಳ ಸರಣಿಯನ್ನು ಶುಕ್ಲಾ, ಭಾರತೀಯ ಸೇನೆಯ ಕುರಿತ ಚಿತ್ರವನ್ನು ಬೆನಗಲ್ ನಿರ್ದೇಶಿಸಿದ್ದಾರೆ. 2016ರ ಅಂತ್ಯಕ್ಕೆ ಇವು ಸಜ್ಜಾಗಲಿವೆ. ಕಳೆದ ವರ್ಷ ಟಿವಿ ತಯಾರಿಸಿದ ಭಾರತೀಯ ಸಂವಿಧಾನ ರಚನೆಯ ಬಗೆಗಿನ 10 ಕಂತುಗಳ ಸರಣಿಯ ಯಶಸ್ಸಿನ ಬಳಿಕ ಈ ಯೋಜನೆಗೆ ಜೀವ ಬಂದಿದೆ.

Related Stories

No stories found.

Advertisement

X
Kannada Prabha
www.kannadaprabha.com