ಲಕ್ನೋ: ತನ್ನ ಪತ್ನಿ ದೇಶ ಬಿಟ್ಟು ಹೋಗೋಣವೇ? ಎಂದು ಕೇಳುತ್ತಾ ಇದ್ದಾರೆ ಎಂಬ ಅಮೀರ್ ಖಾನ್ ವಿವಾದಿತ ಹೇಳಿಕೆಯ ಬಗ್ಗೆ ಪ್ರಸ್ತಾಪಿದ ಉತ್ತರ ಪ್ರದೇಶದ ಸಚಿವ ಅಜಂ ಖಾನ್, ಅಮೀರ್ ಖಾನ್ ಈ ರೀತಿ ಹೇಳಲಿಲ್ಲ. ಅವರ ಹೆಂಡತಿ ಕಿರಣ್ ಹಿಂದೂ, ಅವರು ಈ ಮಾತನ್ನು ಹೇಳಿರುವುದು. ಹಿಂದೂವಾಗಿರುವ ಆಕೆಗೇ ಇಷ್ಟೊಂದು ಅಭದ್ರತೆ ಕಾಡಬೇಕಾದರೆ ಪಾಪ, ಯಾವುದೇ ಬೆಂಬಲ ಇಲ್ಲದಿರುವ ಮುಸ್ಲಿಮರ ಸ್ಥಿತಿ ಇನ್ನೇನಾಗಿರಬೇಡ? ಎಂದು ಪ್ರಶ್ನಿಸಿದ್ದಾರೆ.