
ಬೆಂಗಳೂರು: ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಬಾಲಿವುಡ್ ನಟ ಅಮೀರ್ ಖಾನ್ ನೀಡಿರುವ ಹೇಳಿಕೆ ಟೀಕೆಗಳಿಗಷ್ಟೇ ಗುರಿಯಾಗದೆ, ಅಮೀರ್ ಖಾನ್ ರಾಯಭಾರಿಯಾಗಿ ಪ್ರತಿನಿಧಿಸುವ ಸಂಸ್ಥೆಯ ಮೇಲೂ ಪರಿಣಾಮ ಬೀರಿದೆ.
ಅಮೀರ್ ಖಾನ್ ಹೇಳಿಕೆಯನ್ನು ಖಂಡಿಸಲು ಸಾಮಾಜಿಕ ಜಾಲತಾಣ ಬಳಸುವ ಜನರು ಹೊಸ ವಿಧಾನ ಅನುಸರಿಸುತ್ತಿದ್ದು, ಅಮೀರ್ ಖಾನ್ ರಾಯಭಾರಿಯಾಗಿರುವ ಇ-ಕಾಮರ್ಸ್ ಸಂಸ್ಥೆ ಸ್ನ್ಯಾಪ್ ಡೀಲ್. ಕಾಂ ನ ಆಪ್ ಗಳನ್ನು ಮೊಬೈಲ್ ನಿಂದ ತೆಗೆದುಹಾಕುತ್ತಿದ್ದಾರೆ. ಈ ವರೆಗು ಅಂದಾಜು 85 ,000 ಜನರು ತಮ್ಮ ಮೊಬೈಲ್ ನಿಂದ ಸ್ನ್ಯಾಪ್ ಡೀಲ್.ಕಾಂ ಆಪ್ ನ್ನು ಅನ್ ಇನ್ಸ್ಟಾಲ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಆಪ್ ಗೆ 5 ಸ್ಟಾರ್ ರೇಟಿಂಗ್ ನೀಡಿದ್ದ ಗ್ರಾಹಕರೂ ಸಹ ಅಮೀರ್ ಖಾನ್ ರಾಯಭಾರಿಯಾಗಿರುವ ಸ್ನ್ಯಾಪ್ ಡೀಲ್ ಆಪ್ ನ್ನು ಮೊಬೈಲ್ ನಿಂದ ತೆಗೆದುಹಾಕುತ್ತಿದ್ದಾರೆ. ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿದ್ದ ಅಮೀರ್ ಖಾನ್ ಅವರನ್ನು ರಾಯಭಾರಿತ್ವದಿಂದ ಕೈಬಿಡುವವರೆಗೂ ಸ್ನ್ಯಾಪ್ ಡೀಲ್ ಮೂಲಕ ಯಾವುದೇ ವಸ್ತುಗಳನ್ನು ಖರೀದಿಸುವುದಿಲ್ಲ ಎಂದು ಅಮೀರ್ ಖಾನ್ ಹೇಳಿಕೆಯನ್ನು ವಿರೋಧಿಸುತ್ತಿರುವ ಸಾಮಾಜಿಕ ಜಾಲತಾಣದ ಜನರು ಪಟ್ಟು ಹಿಡಿದಿದ್ದಾರೆ.
Advertisement