ಸಾಂದರ್ಭಿಕ ಚಿತ್ರ
ದೇಶ
ಕೈಬರಹದ ಪಾಸ್ಪೋರ್ಟ್‍ಗಿಲ್ಲ ಬೆಲೆ
ಬುಧವಾರದಿಂದ ಕೇಂದ್ರ ಸರ್ಕಾರವು ಭಾರತೀಯ ನಾಗರಿಕರ ಕೈಬರಹದ ಪಾಸ್ ಪೋರ್ಟ್‍ಗಳನ್ನು...
ನವದೆಹಲಿ: ಬುಧವಾರದಿಂದ ಕೇಂದ್ರ ಸರ್ಕಾರವು ಭಾರತೀಯ ನಾಗರಿಕರ ಕೈಬರಹದ ಪಾಸ್ ಪೋರ್ಟ್‍ಗಳನ್ನು ಸ್ವೀಕರಿಸುವುದಿಲ್ಲ.
ಕೈಬರಹವಿದ್ದ ಪಾಸ್‍ಪೋರ್ಟ್‍ಗಳನ್ನು ಮಷೀನ್-ರೀಡೇಬಲ್ ಪಾಸ್‍ಪೋರ್ಟ್‍ಗಳಾಗಿ (ಎಂಆರ್‍ಪಿ) ಬದಲಾಯಿಸುವಂತೆ ಅಂತಾರಾಷ್ಟ್ರೀಯ ನಾಗರಿಕ ವಿಮಾನ ಯಾನ ಸಂಸ್ಥೆಯು ನವೆಂಬರ್ 24ರ ಗಡುವು ನೀಡಿತ್ತು.
ಹೀಗಾಗಿ, ನ.25ರಿಂದ ಎಂಆರ್‍ಪಿ ಹೊರತಾದ ಪಾಸ್ಪೋರ್ಟ್ ಮೂಲಕ ಪ್ರಯಾಣಿಸುವವರಿಗೆ ವಿದೇಶಿ ಸರ್ಕಾರಗಳು ವೀಸಾ ನಿರಾಕರಿಸಬಹುದು ಅಥವಾ ಪ್ರವೇಶಕ್ಕೆ ನಿರ್ಬಂಧ ವಿಧಿಸಬಹುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. 2001ರಿಂದ ಭಾರತ ಸರ್ಕಾರವು ಎಂಆರ್‍ಪಿಯನ್ನು ವಿತರಿಸುತ್ತಿದೆ. ಇದಕ್ಕೆ ಮೊದಲಿನವೆಲ್ಲ ಕೈಬರಹದವುಗಳೇ ಆಗಿದ್ದವು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ