ವಿಶ್ವಾದ್ಯಂತ ವೀರಪ್ಪನ್ ಸೆಂಟು!

ಕಾಡುಗಳ್ಳ ವೀರಪ್ಪನ್ ಭಾರತದವರ ಪಾಲಿಗಂತೂ ರೋಲ್ ಮಾಡೆಲ್ ಅಲ್ಲ. ಹೀಗಿರುವಾಗ ವೀರಪ್ಪನ್...
ಕಾಡುಗಳ್ಳ ವೀರಪ್ಪನ್
ಕಾಡುಗಳ್ಳ ವೀರಪ್ಪನ್

ಕೊಚ್ಚಿ: ಕಾಡುಗಳ್ಳ ವೀರಪ್ಪನ್ ಭಾರತದವರ ಪಾಲಿಗಂತೂ ರೋಲ್ ಮಾಡೆಲ್ ಅಲ್ಲ. ಹೀಗಿರುವಾಗ ವೀರಪ್ಪನ್ ಯಾವುದಾದರೂ ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಆಗುವುದು ಸಾಧ್ಯವೇ? ವೀರಪ್ಪನ್ ಸತ್ತು 11 ವರ್ಷಗಳ ನಂತರ ಮಾಡೆಲ್ ಆಗಿ ಮರುಜನ್ಮ ಪಡೆದಿದ್ದಾನೆ. 

ಬ್ರಿಟನ್‍ನ ಖ್ಯಾತ ಕಾಸ್ಮೆಟಿಕ್ ಕಂಪನಿ ಲಶ್ ಹೊರತಂದಿರುವ ಮೀಸೆ ಅಂಟಿಸುವ ಗೋಂದು ಹಾಗೂ ಸುಗಂಧ ದ್ರವ್ಯವೊಂದರ ಮೇಲೆ ಮೀಸೆಧಾರಿ ವೀರಪ್ಪನ್‍ನ ಚಿತ್ರಗಳು ರಾರಾಜಿಸುತ್ತಿವೆ ಎಂದು `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. 

ಆದರೆ ಈ ಕುಖ್ಯಾತನ ಹೆಸರಿನ ಪ್ರಾಡಕ್ಟುಗಳಿಂದ ಕಂಪನಿ ಭಾರಿ ಪ್ರತಿಭಟನೆ ಎದುರಿಸುವಂತಾಗಿದೆ. ವೀರಪ್ಪನ್ ಮುಸ್ತಾಷ್ ವ್ಯಾಕ್ಸ್ ಮತ್ತು ಸ್ಮಗ್ಲರ್'ಸ್ ಸೋಲ್ ಎಂಬ 2 ಉತ್ಪನ್ನಗಳ ಮೇಲೂ ವೀರಪ್ಪನ್ ಚಿತ್ರವಿದ್ದು, ಪ್ರಾಣಿದಯಾ ಸಂಸ್ಥೆಗಳು ಉತ್ಪನ್ನಗಳನ್ನು ಹಿಂತೆಗೆದುಕೊಳ್ಳಲು ಆಗ್ರಹಿಸಿವೆ. 20 ವರ್ಷಗಳಿಂದ ನಡೆದುಕೊಂಡು ಬಂದಿರುವ ಲಶ್ ಕಂಪನಿಗೆ ವಿಶ್ವಾದ್ಯಂತ 900 ಶಾಖೆಗಳಿವೆ. 

ವಿರೋಧಕ್ಕೆ ಪ್ರತಿಕ್ರಿಯಿಸಿರುವ ಕಂಪನಿ, ತಾನೂ ಪ್ರಾಣಿಹತ್ಯೆ ವಿರೋಧಿಯೇ ಎಂದಿದೆಯಾದರೂ, ವೀರಪ್ಪನ್ ಹೆಸರಿನ ಹಾಗೂ ಮುಖಚಿತ್ರದ ಉತ್ಪನ್ನಗಳನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದೆ. ಆನ್ ಲೈನ್‍ನಲ್ಲೂ ಇದನ್ನು ವಿರೋಧಿಸಿ ಸಹಿಸಂಗ್ರಹ ಅಭಿಯಾನ ಆರಂಭವಾಗಿದ್ದು, 62 ಸಾವಿರ ಸಹಿಗಳು ಜಮೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com