ಮಲ್ಯರಿಂದ ಮೂಲ ಸಾಲ ಪಾವತಿ ಆಫರ್

ಕಿಂಗ್‍ಫಿಶರ್ ಏರ್‍ಲೈನ್ಸ್ ಚೇರ್ಮನ್ ವಿಜಯ್ ಮಲ್ಯ ಬ್ಯಾಂಕ್‍ಗಳಿಗೆ ಮೂಲ ಸಾಲ ಪಾವತಿಸುವ ಆಫರ್ ...
ವಿಜಯ್ ಮಲ್ಯ
ವಿಜಯ್ ಮಲ್ಯ
ಮುಂಬೈ: ಕಿಂಗ್‍ಫಿಶರ್ ಏರ್‍ಲೈನ್ಸ್ ಚೇರ್ಮನ್ ವಿಜಯ್ ಮಲ್ಯ ಬ್ಯಾಂಕ್‍ಗಳಿಗೆ ಮೂಲ ಸಾಲ ಪಾವತಿಸುವ ಆಫರ್ ನೀಡಿದ್ದಾರೆ. ಈ ಸಂಬಂಧ ಬ್ಯಾಂಕ್‍ಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತನ್ನ ಹೆಸರು ಹೇಳಲಿಚ್ಚಿಸಿದ ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. 
ಮಲ್ಯ ಮುಂದಿಟ್ಟಿರುವ ಆಫರ್ ಕುರಿತು ಬ್ಯಾಂಕ್‍ಗಳು ಚರ್ಚೆ ನಡೆಸುತ್ತಿವೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯದ ಜೊತೆಗೂ ಮಾತುಕತೆಯಲ್ಲಿ ನಿರತವಾಗಿವೆ ಎಂದು ಅವರು ತಿಳಿಸಿದ್ದಾರೆ. ಮೂಲ ಸಾಲ ರು.4,500 ರಿಂದ 5,000 ಕೋಟಿ ಆಗಲಿದೆ. ಇದಕ್ಕೆ ಬಡ್ಡಿ ರು.2,000 ಕೋಟಿ ಆಗಲಿದೆ. ಬಡ್ಡಿಯನ್ನು ಬಿಟ್ಟುಕೊಡಬೇಕೆಂದು ಮಲ್ಯ ಮನವಿ ಮಾಡಿದ್ದಾರೆ ಎನ್ನಲಾಗಿದೆ. 
ಆದರೂ ಬ್ಯಾಂಕ್‍ಗಳು ಇಷ್ಟೊಂದು ಹಣ ಬಿಟ್ಟುಕೊಡಲು ಸಿದ್ಧರಿಲ್ಲ. ಬಡ್ಡಿ ಹಣವನ್ನೂ ನೀಡುವಂತೆ ಒತ್ತಾಯಿಸಬಹುದು ಎಂದು ಹೇಳಲಾಗಿದೆ. ಎಸ್‍ಬಿಐ ನೇತೃತ್ವದಲ್ಲಿ ಹಲವು ಬ್ಯಾಂಕ್‍ಗಳು ಒಗ್ಗೂಡಿ ವಾರ್ಷಿಕ ಬಡ್ಡಿದರ ಶೇ.15.5ರಂತೆ ಸಾಲ ನೀಡಿದ್ದವು. ಇದರ ಪ್ರಕಾರ 2014ರ ಜನವರಿ ಅಂತ್ಯಕ್ಕೆ ಮಲ್ಯ ಪಾವತಿಸಬೇಕಾದ ಒಟ್ಟು ಸಾಲ ಬಡ್ಡಿ ಸೇರಿ ರು.6,963 ಕೋಟಿಗಳಾಗಲಿದೆ. 
ಎಸ್ ಬಿಐ ಈಗಾಗಲೆ ಮುಂಬೈ ವಿಮಾನ ನಿಲ್ದಾಣದಲ್ಲಿರುವ ಕಿಂಗ್ ಫಿಶರ್ ಆಸ್ತಿಯನ್ನು ಹರಾಜಿಗಿಟ್ಟಿದೆ. ಕಿಂಗ್‍ಫಿಶರ್ ಏರ್‍ಲೈನ್ ವಕ್ತಾರರು ಈ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. 
ಕಿಂಗ್ ಫಿಶರ್ ಏರ್ ಲೈನ್ಸ್ ಆರಂಭವಾದಂದಿನಿಂದಲೂ ಒಂದು ವರ್ಷವೂ ಲಾಭ ಗಳಿಸಿಲ್ಲ. ಎಲ್ಲ ಸಿಬ್ಬಂದಿಗೆ ಇನ್ನೂ ಪೂರ್ಣವಾಗಿ ವೇತನವನ್ನೂ ಪಾವತಿಸಿಲ್ಲ. ವಿಮಾನ ನಿಲ್ದಾಣಗಳ ಬಾಡಿಗೆ ಹಣವನ್ನೂ ಕಂಪನಿ ಪಾವತಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com