ವ್ಯಾಪಾರಕ್ಕೆ ದೇವರ ಹೆಸರು ಬಳಸುವಂತಿಲ್ಲ: ಸುಪ್ರೀಂಕೋರ್ಟ್

``ದೇವರ ಹೆಸರು, ಪವಿತ್ರಗ್ರಂಥಗಳ ಹೆಸರನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಟ್ರೇಡ್‍ಮಾರ್ಕ್ ಮಾಡಿ ಕೊಳ್ಳುವಂತಿಲ್ಲ,'' ಎಂದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ``ದೇವರ ಹೆಸರು, ಪವಿತ್ರಗ್ರಂಥಗಳ ಹೆಸರನ್ನು ಯಾವುದೇ ವಾಣಿಜ್ಯ ಉದ್ದೇಶಕ್ಕಾಗಿ ಟ್ರೇಡ್‍ಮಾರ್ಕ್ ಮಾಡಿಕೊಳ್ಳುವಂತಿಲ್ಲ,'' ಎಂದು ಸುಪ್ರೀಂ ಕೋರ್ಟ್ ತೀರ್ಪು  ನೀಡಿದೆ.

``ಕುರಾನ್, ಬೈಬಲ್, ಗುರು ಗ್ರಂಥ ಸಾಹಿಬ್, ರಾಮಾಯಣ ಮುಂತಾದ ಹಲವಾರು ಪವಿತ್ರ ಗ್ರಂಥಗಳ ಹೆಸರನ್ನು ಮಾರಾಟದ ವಸ್ತು ಅಥವಾ ಸೇವೆಗೆ ಬಳಸಿಕೊಳ್ಳಬಹುದೇ,'' ಎಂಬ  ಪ್ರಶ್ನೆಗೆ ಸುಪ್ರೀಂ `ಇಲ್ಲ' ಎಂದಿದೆ. ಕಾನೂನಿನ ಪ್ರಕಾರ ವ್ಯಾಪಾರಕ್ಕೆ ದೇವ ದೇವತೆಗಳ ನೆರವು  ಪಡೆಯುವಂತಿಲ್ಲ. ಇದು ಜನತೆಯ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಿದೆ,'' ಎಂದು ಸುಪ್ರೀಂಕೋ ರ್ಟ್ ಪೀಠ ಹೇಳಿದೆ.

ಬಿಹಾರದ ಲಾಲ್‍ಬಾಬು ಪ್ರಿಯದರ್ಶಿ ಎಂಬ ಕಂಪನಿ ತನ್ನ ಅಗರಬತ್ತಿಗೆ `ರಾಮಾಯಣ' ಎಂದು  ಹೆಸರಿಟ್ಟುಕೊಳ್ಳಲು ಬೌದ್ಧಿಕ ಹಕ್ಕು ಮನವಿ ಮಂಡಳಿಯ ಮುಂದೆ ಕೋರಿಕೊಂಡಿತ್ತು. ಇದನ್ನು  ಅಮೃತ್ ಪಾಲ್ ಸಿಂಗ್ ಎಂಬುವರು ವಿರೋಧಿಸಿದ್ದರು. ಮಂಡಳಿ ಬಿಹಾರ ಕಂಪನಿಗೆ ಈ  ಟ್ರೇಡ್‍ಮಾರ್ಕ್ ನೀಡಲು ನಿರಾಕರಿಸಿತ್ತು. ನ್ಯಾ.ರಂಜನ್ ಗೋಗೋಯ್ ಹಾಗೂ ನ್ಯಾ.ಎನ್ .ವಿ.ರಾಮಣ್ಣ ಅವರನ್ನೊಳಗೊಂಡ ಪೀಠ ಪ್ರಿಯದರ್ಶಿ ಸಂಸ್ಥೆಯ ವಿರುದ್ಧ ತೀರ್ಪಿತ್ತಿದೆ.

``ರಾಮಾಯಣ' ಎಂಬುದು ಧರ್ಮ ಗ್ರಂಥ. ಅದನ್ನು ಟ್ರೇಡ್ ಮಾರ್ಕ್ ರೀತಿ ಬಳಸುವುದು  ವಾಣಿಜ್ಯ ವಹಿವಾಟು ಕಾಯಿದೆ ಪ್ರಕಾರ ಸರಿಯಲ್ಲ ಎಂದು ಪೀಠ 16 ಪುಟಗಳ ತೀರ್ಪಿನಲ್ಲಿ ಹೇಳಿದೆ.  ಅಗರಬತ್ತಿ ಪೊಟ್ಟಣದ ಮೇಲೆ ಮುದ್ರಿಸಲಾಗಿರುವ ರಾಮ, ಲಕ್ಷ್ಮಣ, ಸೀತೆಯರ ಚಿತ್ರಕ್ಕೂ ಕೋರ್ಟ್  ಆಕ್ಷೇಪ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com