
ನವದೆಹಲಿ: 2013ರಲ್ಲೆ ನಡೆದ ಗಲಭೆ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ಆಮ್ ಆದ್ಮಿ ಪಕ್ಷದ ಶಾಸಕ ಅಖಿಲೇಶ್ ತ್ರಿಪಾಠಿ ಅವರಿಗೆ ಶುಕ್ರವಾರ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ನಿನ್ನೆ ದೆಹಲಿ ಪೊಲೀಸರು ತ್ರಿಪಾಠಿ ಅವರನ್ನು ಬಂಧಿಸಿ ಕೋರ್ಟ್ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಎಎಪಿ ಶಾಸಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಅಖಿಲೇಶ್ ತ್ರಿಪಾಠಿ ಮಾಡೆಲ್ ಟೌನ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದು, ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾದ ಐದನೇ ಎಎಪಿ ಶಾಸಕರಾಗಿದ್ದಾರೆ.
Advertisement