ಸಾಂದರ್ಭಿಕ ಚಿತ್ರ
ದೇಶ
ಮಹಾರಾಷ್ಟ್ರದ ಎಂಜಿನಿಯರ್ ಐಎಸ್‍ನ ಆತ್ಮಹತ್ಯಾ ಬಾಂಬರ್
ಸಿವಿಲ್ ಎಂಜಿನಿಯರಿಂಗ್ ಓದಿದ್ದ ಈತ ಭಯೋತ್ಪಾದಕ ಸಂಘಟನೆ ಐಎಸ್‍ನ ಭಾರತದ ಮೊದಲ ಆತ್ಮಾಹುತಿ...
ನವದೆಹಲಿ: ಸಿವಿಲ್ ಎಂಜಿನಿಯರಿಂಗ್ ಓದಿದ್ದ ಈತ ಭಯೋತ್ಪಾದಕ ಸಂಘಟನೆ ಐಎಸ್‍ನ ಭಾರತದ ಮೊದಲ ಆತ್ಮಾಹುತಿ ಬಾಂಬರ್. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಮಹಾರಾಷ್ಟ್ರದ ಪನ್ವೇಲ್ ಮೂಲದ ಅರೀಬ್ ಫಯಾಜ್ ಮಜೀದ್ (23) ಇಷ್ಟೊತ್ತಿಗೆ ಆಹುತಿಯಾಗಿರಬೇಕಿತ್ತು.
ಆದರೆ, ಸತತ ಮೂರು ವಿಫಲ ಪ್ರಯತ್ನಗಳ ನಂತರ, ಸ್ವದೇಶಕ್ಕೆ ಹಿಂದಿರುಗಿ ಅರೀಬ್ ಪೆÇಲೀಸರ ಬಂಧನಕ್ಕೆ ಒಳಗಾಗಿರುವ ಆತ್ಮಾಹುತಿ ದಾಳಿ ಹಾಗೂ ಐಎಸ್‍ನ ಕೆಲ ವಿವರಗಳನ್ನು ನೀಡಿದ್ದಾನೆ ಎಂದು ಎನ್‍ಡಿಟಿವಿ ವರದಿ ಮಾಡಿದೆ. ಸಿರಿಯಾ ಯುವತಿಯನ್ನು ಮದುವೆಯಾಗಿದ್ದರಿಂದ ಅರೀಬ್‍ಗೆ ಐಎಸ್ ಸಂಪರ್ಕ ಸುಲಭವಾಯಿತು.
ಇರಾಕ್‍ನ ಮೊಸುಲ್ ನಗರದಲ್ಲಿ ಕುರ್ಡಿಶ್ ಸೇನೆಯ ವಿರುದ್ಧ ಈತ ಆತ್ಮಾಹುತಿ ದಾಳಿ ನಡೆಸಬೇಕಿತ್ತು. ಆದರೆ, ಸತತ ಮೂರು ಪ್ರಯತ್ನ ನಡೆಸಿದರೂ ನಾನಾ ಕಾರಣಗಳಿಂದಾಗಿ ಪ್ರಯತ್ನ ವಿಫಲವಾಯಿತು.
ಸ್ಫೋಟಕಗಳಿದ್ದ ಟ್ರಕ್ ಅನ್ನು ಕುರ್ಡಿಶ್ ಸೇನಾ ಠಾಣ್ಯದತ್ತ ನುಗ್ಗಿಸುವ ಪ್ರಯತ್ನಗಳು ವಿಫಲವಾಗಿದ್ದರಿಂದ ಬೇಸತ್ತ ಅರೀಬ್, ದೇಹಕ್ಕೆ ಕಟ್ಟಿಕೊಂಡಿದ್ದ ಸ್ಫೋಟಕಗಳನ್ನು ಸ್ಫೋಟಿಸುವ ಮೂಲಕ ಆತ್ಮಾಹುತಿಯಾಗಲು ಬಯಸಿದ್ದ. ಆದರೆ, ಐಎಸ್ ಕಮಾಂಡರ್‍ನೊಬ್ಬ ತಡೆದಿದ್ದ ಎಂದು ವಿಚಾರಣಾ ಅಧಿಕಾರಿಗಳ ಮುಂದೆ ವಿವರಿಸಿದ್ದಾನೆ.
2014ರ ಮೇ 24ರಂದು ತನ್ನ ನಾಲ್ವರು ಮಿತ್ರರ ಜೊತೆ ಮುಂಬೈನಿಂದ ಹೊರಟ ಅರೀಬ್ ಹಿಂದಿರುಗಿದ್ದು ಈ ನವೆಂಬರ್‍ನಲ್ಲಿ. ಅಂದಿನಿಂದ ಬಂಧನದಲ್ಲಿರುವ ಆತನನ್ನು ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿವೆ. ಈ ಸಂದರ್ಭದಲ್ಲಿ, ಐಎಸ್ ಕುರಿತ ಹಲವಾರು ಮಹತ್ವದ ವಿಷಯಗಳನ್ನು ಆತ ಬಾಯ್ಬಿಟ್ಟಿದ್ದಾನೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ