ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಂಗವಿಕಲ ಸಹಾಯಕನಿಗೂ ರಿಸರ್ವೇಶನ್

ಅಂಗವಿಕಲರ ನೆರವಿಗೆ ಕೊನೆಗೂ ಧಾವಿಸಿರುವ ರೈಲ್ವೆ ಇಲಾಖೆ, ಸ್ಲೀಪರ್ ಕೋಚ್ ಬರ್ಥ್‍ಗಳಲ್ಲಿ ಮಧ್ಯದ...
ನವದೆಹಲಿ: ಅಂಗವಿಕಲರ ನೆರವಿಗೆ ಕೊನೆಗೂ ಧಾವಿಸಿರುವ ರೈಲ್ವೆ ಇಲಾಖೆ, ಸ್ಲೀಪರ್ ಕೋಚ್ ಬರ್ಥ್‍ಗಳಲ್ಲಿ ಮಧ್ಯದ ಸೀಟನ್ನು ಅಂಗವಿಕಲ ವ್ಯಕ್ತಿಯ ನೆರವಿಗೆಂದು ಜೊತೆಗೆ ಬರುವ ಪ್ರಯಾಣಿಕನಿಗೆ ಮೀಸಲಾಗಿಡಲು ನಿರ್ಧರಿಸಿದೆ. 
ಈ ನಿಯಮ ಡಿ. 22ರಿಂದ ಜಾರಿಗೆ ಬರಲಿದೆ. ಒಂದೇ ಕ್ಯಾಬಿನ್‍ನ ಮಧ್ಯ ಮತ್ತು ಕೆಳ ಬರ್ಥ್‍ಗಳು ಇನ್ಮುಂದೆ ಅಂಗವಿಕಲ ಪ್ರಯಾಣಿಕರಿಗೆ ಮೀಸಲಾಗಲಿವೆ. ಇದರಲ್ಲಿ ಮಧ್ಯದ ಬರ್ಥ್ ಜೊತೆಗಾರನಿಗೆ ಸಿಗಲಿದೆ. 
ಒಂದು ವೇಳೆ ಅಂಗವಿಕಲ ಕೋಟಾ ಖಾಲಿ ಇದ್ದರೆ, ಸಹಜವಾಗಿ ಈ ಸೀಟನ್ನು ಒಂಟಿಯಾಗಿ ಪಯಣಿಸುವ ಹಿರಿಯ ನಾಗರಿಕರಿಗೆ ನೀಡುವ ರೀತಿ ತಂತ್ರಾಂಶ ರೂಪಿಸಲಾಗಿದೆ. ಇದುವರೆಗೆ ರೈಲ್ವೆ ಇಲಾಖೆ ಅಂಗವಿಕಲರಿಗೆ ದರದಲ್ಲಿ ಮಾತ್ರ ಕೊಂಚ ರಿಯಾಯಿತಿ ನೀಡುತ್ತಿತ್ತು.

Related Stories

No stories found.

Advertisement

X
Kannada Prabha
www.kannadaprabha.com