ದಕ್ಷಿಣ ಭಾರತದ ಮುಸ್ಲಿಂ ಯುವಕರೇ ಹೆಚ್ಚಾಗಿ ಇಸಿಸ್ ಕಡೆಗೆ ಆಕರ್ಷಿತರಾಗುತ್ತಿದ್ದಾರೆ: ಕಿರಣ್ ರಿಜಿಜು

ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಮುಸ್ಲಿಂ ಯುವಕರು ಹೆಚ್ಚಾಗಿ ಇಸಿಸ್ ಉಗ್ರ ಸಂಘಟನೆಗೆ ಬಗ್ಗೆ ...
ಕಿರೆಣ್ ರಿಜಿಜು
ಕಿರೆಣ್ ರಿಜಿಜು

ನವದೆಹಲಿ: ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಮುಸ್ಲಿಂ ಯುವಕರು ಹೆಚ್ಚಾಗಿ ಇಸಿಸ್ ಉಗ್ರ ಸಂಘಟನೆಗೆ ಬಗ್ಗೆ ಆಕರ್ಷಿತರಾಗುತ್ತಿದ್ದಾರೆ ಎಂದು ಸಚಿವ ಕಿರೆಣ್ ರಿಜಿಜು ಹೇಳಿದ್ದಾರೆ.

ಈ ರೀತಿಯ ಹೇಳಿಕೆ ನೀಡುವುದಕ್ಕೆ ನನಗೆ ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿರುವ ಕಿರೆಣ್ ರಿಜಿಜು, ಮಧ್ಯ ಪ್ರಾಚ್ಯ ರಾಷ್ಟ್ರಗಳೊಂದಿಗೆ ದಕ್ಷಿಣ ಭಾರತ ರಾಜ್ಯಗಳು ಸಾಂಪ್ರಾದಾಯಿಕ  ಸಂಬಂಧ ಹೊಂದಿದ್ದಾರೆ. ಬಹಳ ಹಿಂದಿನ ಕಾಲದಿಂದಲೂ ಮಧ್ಯಪ್ರಾಚ್ಯ ದೇಶಗಳೊಂದಿಗೆ ದಕ್ಷಿಣ ರಾಜ್ಯಗಳ ಸಂಚಾರ ವಿನಿಮಯವಿದೆ. ಆದರೆ ಇದು ಇಸಿಸ್ ಕಡೆಗೆ ಆಕರ್ಷಿತವಾಗಲು ಕಾರಣ ಎಂದು ನಾನು ಹೇಳುತ್ತಿಲ್ಲ ಎಂದು ಅವರು ಸ್ಪಷ್ಪ ಪಡಿಸಿದ್ದಾರೆ.

ಇನ್ನು ವಿಶ್ವದ ಇತರೆಡೆ ನಡೆದ ದಾಳಿಯನ್ನು ಗಮನದಲ್ಲಿರಿಸಿಕೊಂಡಿರುವ ಭಾರತ, ಎಂಥಹುದ್ದೇ ಪರಿಸ್ಥಿತಿ ಎದುರಿಸಲು ಸಿದ್ದವಿದೆ ಎಂದು ಕಿರೆಣ್ ರಿಜಿಜು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com